ಚೀನಾ, ಟ್ರಂಪ್‌, ಪುಟಿನ್‌ಗೆ‌ ಒಟ್ಟಿಗೇ ಬೆವರಿಳಿಸಿದ ಜೋ ಬೈಡೆನ್!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಚೀನಾ ವಿರುದ್ಧ ಮತ್ತೊಮ್ಮೆ ಓಪನ್‌ ಆಗಿ ಮಾತನಾಡಿದ್ದಾರೆ. ಚೀನಾದ ಅನ್ಯಾಯಕಾರಿ ಆರ್ಥಿಕ ನೀತಿಗಳು, ಪ್ರಾಕ್ಟೀಸ್‌ಗಳಿಗೆ ಕೌಂಟರ್‌ ಕೊಡೋದಕ್ಕೆ, ಭಾರತದಂತ ಸಮಾನ ಮನಸ್ಕ ದೇಶಗಳ ಜೊತೆ ಅಮೆರಿಕ ತನ್ನ ಸಂಬಂಧವನ್ನ ಇಂಪ್ರೂವ್‌ ಮಾಡ್ಕೊಳ್ತಿದೆ. ಆಸ್ಟ್ರೇಲಿಯಾ, ಜಪಾನ್‌ ಹಾಗೂ ಸೌತ್‌ ಕೊರಿಯಾ ಮೇಲೂ ನಾವು ಜಾಸ್ತಿ ಫೋಕಸ್‌ ಮಾಡ್ತಿದ್ದೀವಿ. ನಮಗೆ ಚೀನಾ ಜೊತೆಗೆ ಕಾಂಪಿಟೇಶನ್ ಮಾಡೋಕೆ ಆಸಕ್ತಿ ಇದೆ. ಆದ್ರೆ ಕಾನ್‌ಫ್ಲಿಕ್ಟ್‌ ಅಂದ್ರೆ ಸಂಘರ್ಷಕ್ಕೆ ಇಳಿಯೋಕೆ ಇಷ್ಟ ಇಲ್ಲ ಅಂದಿದ್ದಾರೆ. ಇದೇ ವೇಳೆ ಬೈಡೆನ್ ಇಂಡೈರೆಕ್ಟಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪುಟಿನ್‌ ಪ್ರೇಮದ ಬಗ್ಗೆಗೂ ಟೀಕಿಸಿ, ʻನನ್ನ ಪೂರ್ವವರ್ತಿ… ಅಂದ್ರೆ ನನಗೆ ಮುಂಚೆ ಪ್ರೆಸಿಡೆಂಟ್‌ ಆಗಿದ್ದ ವ್ಯಕ್ತಿ… ರಿಪಬ್ಲಿಕನ್‌ ನಾಯಕ.. ಪುಟಿನ್‌ಗೆ ಏನು ಬೇಕಾದ್ರು ಮಾಡಿʼ ಅಂತ ಹೇಳ್ತಾರೆ. ಇದನ್ನ ಅಕ್ಸೆಪ್ಟ್‌ ಮಾಡ್ಕೊಳ್ಳೋಕಾಗಲ್ಲ. ಅಮೆರಿಕ ರಷ್ಯಾ, ಯುಕ್ರೇನ್‌ ಸಂಘರ್ಷದಿಂದ ಹಿಂದೆ ಸರಿಯಲ್ಲ. ಹಾಗೆ ಮಾಡಿದ್ರೆ ಯುಕ್ರೇನ್‌ನ್ನ ರಿಸ್ಕ್‌ನಲ್ಲಿ ಇಟ್ಟಹಾಗಾಗತ್ತೆ. ಪುಟಿನ್‌ಗೆ ನನ್ನ ಮೆಸೇಜ್‌ ಇಷ್ಟೆ. ನಾವು ಹಿಂದೆ ಸರಿಯಲ್ಲ. ನಾವು ನಿಮಗೆ ಬಗ್ಗಲ್ಲ.. ಅಂತ ಬೈಡೆನ್‌ ಅಬ್ಬರಿಸಿದ್ದಾರೆ.

-masthmagaa.com

Contact Us for Advertisement

Leave a Reply