ಫೋನಿನಲ್ಲೇ ಯುದ್ಧ ಮಾಡಿದ ಅಮೆರಿಕದ ಬೈಡೆನ್ – ಚೀನಾದ ಶಿ ಜಿನ್ ಪಿಂಗ್!

masthmagaa.com:

ಅಮೆರಿಕ-ಚೀನಾ ಸಂಬಂಧ ಮೊದಲೇ ಹದಗೆಟ್ಟಿತ್ತು. ಈಗ ಅಫ್ಘನಿಸ್ತಾನದಲ್ಲಿ ಆಗ್ತಿರೋ ಬೆಳವಣಿಗಳಿಂದ ಹೀಟ್ ಮತ್ತಷ್ಟು ಜಾಸ್ತಿ ಆಗಿದೆ. ಇದೇ ಟೈಮಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಫೋನ್ ನಲ್ಲಿ ಮಾತಾಡಿಕೊಂಡಿದ್ದಾರೆ ಅಂತ ವರದಿಯಾಗಿದೆ. ಕಳೆದ ಏಳು ತಿಂಗಳಲ್ಲೇ ಇದು ಮೊದಲ ಬೈಡೆನ್-ಜಿನ್ಪಿಂಗ್ ಮಾತುಕತೆ. ಈ ವೇಳೆ ‘ವಿಶ್ವದ ಟಾಪ್ 2 ದೇಶಗಳ ಮಧ್ಯೆ ನಡೀತಿರೋ ಕಾಂಪಿಟಿಶನ್, CONFLICT( ಕಾನ್‌ಫ್ಲಿಕ್ಟ್) ಆಗಬಾರದು’ ಅಂತ ಬೈಡೆನ್ ಹೇಳಿದ್ದಾರೆ. ಅಂದ್ರೆ ‘ಸ್ಪರ್ಧೆ ಸಂಘರ್ಷಕ್ಕೆ ಕಾರಣ ಆಗಬಾರದು’ ಅಂತ ಬೈಡೆನ್ ಜಿನ್ಪಿಂಗಿಗೆ ಹೇಳಿದ್ದಾರೆ ಅಂತ ವೈಟ್ ಹೌಸ್ ಹೇಳಿದೆ. ಇದಕ್ಕೆ ಪ್ರತಿಯಾಗಿ ಜಿನ್ಪಿಂಗು ಕೂಡಾ ಟಕ್ಕರ್ ನೀಡಿದ್ದು, ‘ಚೀನಾ ಜೊತೆ ಅಮೆರಿಕದ ಸಂಬಂಧ ನಿಮಗೆ ಮಲ್ಟಿಪಲ್ ಚಾಯ್ಸ್ ಕೊಶ್ಚನ್ ಅಲ್ಲ. ಇದು ಆನ್ಸರ್ ಮಾಡಲೇಬೇಕಾದ ಕೊಶ್ಚನ್. ಅಮೆರಿಕ ಚೀನಾ ಬಗ್ಗೆ ತೋರಿಸೋ ವರ್ತನೆಯಿಂದ ಗಂಭೀರ ಸಮಸ್ಯೆಗಳು ಆಗ್ತಿವೆ. ಇದನ್ನೆಲ್ಲ ಕೂಡಲೇ ಬಗೆಹರಿಸದಿದ್ದರೆ ಇಡೀ ವಿಶ್ವಕ್ಕೇ ಸಮಸ್ಯೆ ಆಗುತ್ತೆ’ ಅಂತ ಹೇಳಿದ್ದಾರೆ ಅಂತ ವರದಿಯಾಗಿದೆ.
ಇಲ್ಲಿ ಪಾಪ ಬೈಡೆನ್ ಬಹಳ ನಿರೀಕ್ಷೆ ಇಟ್ಟುಕೊಂಡು ತಾವೇ ಜಿನ್ಪಿಂಗಿಗೆ ಕಾಲ್ ಮಾಡಿದ್ದರು. ಒಬಾಮಾ ಅಧ್ಯಕ್ಷರಾಗಿದ್ದಾಗ ಬೈಡೆನ್ ಉಪಾಧ್ಯಕರಾಗಿದ್ರಲಾ? ಆಗ ಜಿನ್ಪಿಂಗ್ ಜೊತೆ ಒಳ್ಳೆ ಕನೆಕ್ಷನ್ ಮಾಡಿಕೊಂಡಿದ್ರು ಬೈಡೆನ್. ಈಗ ಅದು ಕೆಲಸಕ್ಕೆ ಬರುತ್ತೆ ಅನ್ನೋ ಲೆಕ್ಕಾಚಾರದಲ್ಲಿ ತಾವೇ ಕಾಲ್ ಮಾಡಿದ್ದಾರೆ. ಆದ್ರೆ ಜಿನ್ಪಿಂಗ್ ಮಾತ್ರ ಯಾವುದೇ ಮುಲಾಜಿಲ್ಲದೇ, ಈಗ ಚೀನಾ ಕೂಡ ನಿಮ್ ಥರಾನೇ ಬಿಗ್ ಡ್ಯಾಡಿ ಅನ್ನೋ ಥರದಲ್ಲಿ ವರ್ತಿಸಿದ್ದಾರೆ.

-masthmagaa.com

Contact Us for Advertisement

Leave a Reply