ಬೈಡೆನ್‌ಗೆ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಸಂಕಷ್ಟ: ಮಗನ ವಿರುದ್ಧ ದೋಷಾರೋಪ

masthmagaa.com:

ಮತ್ತೊಂದು ಅವಧಿಗೆ ಅಮೆರಿಕದ ಅಧ್ಯಕ್ಷರಾಗುವ ಆಸೆ ಹೊಂದಿರೊ ಜೋ ಬೈಡೆನ್‌ರಿಗೆ ಇದೀಗ ಸಂಕಷ್ಟ ಎದರಾಗಿದೆ. ಕಾನೂನು ಬಾಹಿರವಾಗಿ ಬಂದೂಕು ಖರೀದಿಸಿರುವ ಪ್ರಕರಣದಲ್ಲಿ ಬೈಡೆನ್‌ರ ಮಗ ಹಂಟರ್‌ ಬೈಡೆನ್‌ರ ವಿರುದ್ಧ ದೋಷಾರೋಪ ಸಲ್ಲಿಸಲಾಗಿದೆ. 5 ವರ್ಷದ ಹಿಂದೆ ಗನ್‌ ಖರೀದಿ ಮಾಡುವ ವೇಳೆ ಸುಳ್ಳು ಹೇಳಿಕೆಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಗನ್ ಖರೀದಿ ವೇಳೆ ಅವ್ರು ನಶಾ ವಸ್ತು ಸೇವನೆ ಮಾಡೋದಿಲ್ಲ ಅಂತ ಹೇಳಿದ್ರು. ಆದ್ರೆ ಆ ಟೈಮಲ್ಲಿ ಇಲ್‌ಲೀಗಲ್‌ ಆಗಿ ನಶಾ ವಸ್ತು ಸೇವಿಸ್ತಿದ್ರು ಅಂತ ತಿಳಿದು ಬಂದಿದ್ದು, ಅವರ ವಿರುದ್ಧ ಆರೋಪ ಮಾಡಲಾಗಿದೆ. ಇದರ ಜೊತೆಗೆ ತೆರಿಗೆ ಪಾವತಿ ಮಾಡಿಲ್ಲ ಅಂತ ಕೂಡ ಆರೋಪ ಮಾಡಲಾಗಿದೆ. ಸೋ ಈ ಆರೋಪಗಳು ಸಾಬೀತಾದ್ರೆ ಹಂಟರ್‌ಗೆ 25 ವರ್ಷಗಳ ಜೈಲು ಶಿಕ್ಷೆ ಹಾಗೂ 7.5 ಲಕ್ಷ ಡಾಲರ್‌ ದಂಡವನ್ನ ವಿಧಿಸಲಾಗುತ್ತೆ. ಮಗನ ಮೇಲೆ ಬಂದೊದಗಿರೊ ಆರೋಪ ಬೈಡೆನ್‌ರಿಗೆ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಹಿನ್ನಡೆಯಾಗಬಹುದು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply