ಬೇಬಿ ಪೌಡರ್—-ನಿಂದ ಕ್ಯಾನ್ಸರ್?

masthmagaa.com:

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಕೇಸ್ ಈಗ ಮತ್ತೆ ಸುದ್ದಿಯಲ್ಲಿದೆ. ತನ್ನ ಪ್ರಾಡಕ್ಟ್ ಮೇಲೆ ಬಂದಿರೋ ದೂರುಗಳ ಸರಮಾಲೆಯಿಂದ ಬಚಾವಾಗೋಕೆ J&J ಕುತಂತ್ರ ಮಾಡುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಬಂದಿದೆ ಅಂತ 38,000 ಕೇಸುಗಳು ದಾಖಲಾಗಿವೆ. ಪರಿಹಾರ ಕೇಳ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳೋಕೆ J&J ಕಂಪನಿ ಬೇಬಿ ಪೌಡರ್ ವಿಚಾರದಲ್ಲಿ ಏನೇ ಕಂಪ್ಲೇಂಟ್ ಇದ್ದರೂ ಅದನ್ನ ನೋಡಿಕೊಳ್ಳೋದು LTL MANAGEMENT LLC ಯವರು ಅಂತ ಜವಾಬ್ದಾರಿಯನ್ನ ಬೇರೆ ಕಡೆಗೆ ಡೈವರ್ಟ್ ಮಾಡ್ತು. ಈಗ ನೋಡಿದ್ರೆ LTL MANAGEMENT LLC ದಿವಾಳಿಯಾಗಿದೆ ಅಂತ ಹೇಳ್ತಿದೆ. ಹೀಗಾಗಿ ಬೇಬಿ ಪೌಡರ್ ವಿಚಾರದಲ್ಲಿ ಯಾವುದೇ ಹೊಸ ದೂರು ಸ್ವೀಕಾರ ಮಾಡಲ್ಲ ಅಂತ ತಪ್ಪಿಸಿಕೊಳ್ತಿದೆ ಅಂತ ದೂರುದಾರರ ಪರ ವಕೀಲರು ಆರೋಪ ಮಾಡಿದ್ದಾರೆ. ಅಂದಹಾಗೆ J&J ಒಂದು ಪ್ರತಿಷ್ಟಿತ ಅಮೆರಿಕನ್ ಕಂಪನಿ. ಈಗ ಕೊರೋನ ಲಸಿಕೆ ಕೂಡ ಬಂದಿದೆ ಇವ್ರದ್ದು. ಇಂತಾ ಕಂಪನಿಯ ಬೇಬಿ ಪೌಡರ್ ಮೇಲೆ ಅಮೆರಿಕದಲ್ಲೇ ಸಾವಿರಾರು ಕೇಸ್ ದಾಖಲಾಗುತ್ತೆ ಅಂದ್ರೆ ನಿಜಕ್ಕೂ ಇದನ್ನ ಬಳಸೋ ಎಲ್ಲರಿಗೂ ಒಂದು ಸಲ ಇದು ಸೇಫಾ ಅಂತ ಪ್ರಶ್ನೆ ಮೂಡುತ್ತೆ. ಕಂಪನಿ ಮಾತ್ರ ತನ್ನ ಈ ವಿಶ್ವ ವಿಖ್ಯಾತ ಪೌಡರ್ ಸೇಫ್ ಅಂತ ವಾದ ಮಾಡ್ತಾನೆ ಬಂದಿದೆ. ಆದ್ರೆ 2018ರಲ್ಲಿ ರಾಯಿಟರ್ಸ್ ಈ ಸಂಬಂಧ ಒಂದು ತನಿಖಾ ವರದಿ ಪ್ರಕಟ ಮಾಡಿತ್ತು. ಇದರಲ್ಲಿ ಹಲವು ಗಂಭಿರ ಸಂಗತಿ ಬೆಳಕಿಗೆ ಬಂದಿದ್ವು. ಕಂಪನಿಯ ಆಂತರಿಕ ದಾಖಲೆಗಳ ಪ್ರಕಾರ, ತನ್ನ ಬೇಬಿ ಪೌಡರ್ ಗಳಲ್ಲಿ ಕ್ಯಾನ್ಸರ್ ಕಾರಕ OBSESTOS ಹೆಸರಿನ ರಸಾಯನಕ ಸೇರಿಕೊಂಡಿತ್ತು ಅನ್ನೋದು ಕಂಪನಿಗೂ ಗೊತ್ತಿತ್ತು. ಆದ್ರೆ ಇದನ್ನ ಸರ್ಕಾರಿ ಏಜೆನ್ಸಿಗಳಿಗೆ ಮುಚ್ಚಿಡಲಾಗಿತ್ತು ಅಂತ ಸಾಕ್ಷ್ಯ ಸಮೇತ ವರದಿ ಮಾಡಿತ್ತು ರಾಯ್ಸರ್ಸ್ ಸಂಸ್ಥೆ. 1972 ರಿಂದ 1975ರ ನಡುವಿನ ಇವರ ಬೇಬಿ ಪೌಡರ್ ಸ್ಯಾಂಪಲ್ ಗಳಲ್ಲಿ ಈ ಕ್ಯಾನ್ಸರ್ ಕಾರಕ ಅಂಶ ಇತ್ತು ಅಂತ ಲ್ಯಾಬ್ ಟೆಸ್ಟ್ ಗಳಲ್ಲೂ ಸಾಬೀತಾಗಿದೆ ಅಂತ ವರದಿ ಮಾಡಿತ್ತು. ಸೋ ಇದೆಲ್ಲ ಹೊಸ ವಿಚಾರ ಅಲ್ಲ. ಬಹಳ ಹಿಂದಿನಿಂದಲೂ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ OBSESTOS ಇತ್ತು ಅಂತ ಅಮೆರಿಕದಲ್ಲಿ ದೊಡ್ಡ ಮಟ್ಟದ ತನಿಖೆಗಳೂ ಆಗಿವೆ. ಇದ್ದಿದ್ದು ಸಾಬೀತು ಆಗಿದೆ. ಆದ್ರೆ ನಂತರದ ದಿನಗಳಲ್ಲಿ OBSESTOS ಇಲ್ಲದಂತೆ ಕಂಪನಿ ಪೌಡರ್ ತಯಾರಿಸೋಕೆ ಶುರು ಮಾಡ್ತು. ಈಗ ಪೌಡರ್ ಸೇಫ್ ಅಂತ ಅಮೆರಿಕದ FDA ಕೂಡ ಹೇಳ್ತು. ಹೀಗಾಗಿ ಮತ್ತೆ ವಿಶ್ವಾದ್ಯಂತ ಕಂಪನನಿಯ ಈ ಐಕಾನಿಕ್ ಪ್ರಾಡಕ್ಟ್ ಸೇಲ್ ಆಗೋಕೆ ಶುರು ಆಯ್ತು. ಸೋ ಸದ್ಯದ ಮಾಹಿತಿ ಪ್ರಕಾರ ಈ ಪೌಡರ್ ಸೇಫ್. ಅದೇ ಕಾರಣಕ್ಕೆ ಅಮೆರಿಕವಾಗಲೀ, ಭಾರತವಾಗಲೀ, ಯಾವುದೇ ಸರ್ಕಾರವಾಗಲೀ ಈಗ ಈ ಪೌಡರನ್ನ ಬ್ಯಾನ್ ಮಾಡಿಲ್ಲ.

-masthmagaa.com

Contact Us for Advertisement

Leave a Reply