ಮಯನ್ಮಾರ್​​ನಲ್ಲಿ ಅಮೆರಿಕದ ಪ್ರಜೆಯ ಬಂಧನ!

masthmagaa.com:

ಅಮೆರಿಕ ಮೂಲದ ಓರ್ವ ಪತ್ರಕರ್ತನನ್ನು ಮಯನ್ಮಾರ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಮಯನ್ಮಾರ್​ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಹೋರಾಟ ನಾಗರಿಕ ಯುದ್ಧದ ರೂಪ ಪಡೀತಿರೋ ಬೆನ್ನಲ್ಲೇ ಅಮೆರಿಕ ಮೂಲದ ಪತ್ರಕರ್ತ ಡ್ಯಾನಿ ಫೆನ್​​ಸ್ಟರ್ ದೇಶ ತೊರೆಯಲು ಯತ್ನಿಸಿದ್ರು. ಇದಕ್ಕಾಗಿ ಯಾಂಗೋನ್ ವಿಮಾನ ನಿಲ್ದಾಣಕ್ಕೂ ಹೋಗಿದ್ರು. ಆದ್ರೆ ಈ ವೇಳೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಫ್ರಂಟಿಯರ್ ಮಯನ್ಮಾರ್ ಅನ್ನೋ ಮ್ಯಾಗ್ಜೀನ್​​ನಲ್ಲಿ ಡ್ಯಾನಿ ಕೆಲಸ ಮಾಡ್ತಿದ್ರು. ಈ ಬಗ್ಗೆ ಮಾಹಿತಿ ನೀಡಿರೋ ಫ್ರಂಟಿಯಾರ್ ಮಯನ್ಮಾರ್​​, ಡ್ಯಾನಿಯನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅವರನ್ನ ಸಂಪರ್ಕಿಸಲು ಸಾಧ್ಯವಾಗ್ತಿಲ್ಲ. ಡ್ಯಾನಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿದೆ. ಮಯನ್ಮಾರ್​​​​​ನಲ್ಲಿ ಫೆಬ್ರವರಿಯಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯಾದ ಬಳಿಕ ಹಿಂಸಾಚಾರ ಮುಂದುವರಿದುಕೊಂಡೇ ಬಂದಿದೆ. ಈವರೆಗೆ ಸುಮಾರು 34 ಮಂದಿ ಪತ್ರಕರ್ತರನ್ನು ಮಯನ್ಮಾರ್ ಮಿಲಿಟರಿ ಸರ್ಕಾರ ಬಂಧನದಲ್ಲಿಟ್ಟಿದೆ. ಅದೇ ರೀತಿ ಡ್ಯಾನಿ ಫೆನ್​ಸ್ಟರ್​​ರನ್ನು ಕೂಡ ಯಾಂಗೋನ್​​ನ ಜೈಲಲ್ಲಿ ಇಟ್ಟಿರೋ ಸಾಧ್ಯತೆ ಇದೆ. ಇವರು ಅಮೆರಿಕ ಪ್ರಜೆಯಾಗಿರೋದ್ರಿಂದ ಅಮೆರಿಕ ಯಾವ ರೀತಿ ಪ್ರತಿಕ್ರಿಯಿಸುತ್ತೆ ಅಂತ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply