ಸಂವಿಧಾನ ದಿನ: ಸಂವಿಧಾನವೇ ಭಾರತದ ಬಹುದೊಡ್ಡ ಶಕ್ತಿ ಎಂದ ಪ್ರಧಾನಿ ಮೋದಿ

masthmagaa.com:

ಇಂದು ನವೆಂಬರ್‌ 26ರಂದು ಭಾರತದ ಸಂವಿಧಾನವನ್ನ ಅಂಗೀಕರಿಸಲ್ಪಟ್ಟ ದಿನ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಂವಿಧಾನ ದಿನವನ್ನ ಆಚರಿಸಲಾಗಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತಾಡಿದ ಪ್ರಧಾನಿ ಮೋದಿ, ಸಂವಿಧಾನವೇ ಭಾರತದ ಬಹುದೊಡ್ಡ ಶಕ್ತಿ. ಭಾರತ ಪ್ರಜಾಪ್ರಭುತ್ವದ ತಾಯಿ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಇಂದು ಮುಂಬೈ ಭಯೋತ್ಪಾದಕ ದಾಳಿ ನಡೆದು 14 ವರ್ಷಗಳಾಗಿವೆ. ಭಾರತ ತನ್ನ ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನ ಸಂಭ್ರಮಿಸುತ್ತಿರೊ ಸಂದರ್ಭದಲ್ಲೇ, ಶತ್ರುಗಳು ಭಾರತದ ಮೇಲೆ ಅತಿದೊಡ್ಡ ದಾಳಿಯನ್ನ ನಡೆಸಿದ್ರು. ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಗೌರವ ನಮನಗಳನ್ನ ಸಲ್ಲಿಸುತ್ತೇನೆ ಅಂತ ಮೋದಿ ಹೇಳಿದ್ದಾರೆ. ಇತ್ತ ರಾಜ್ಯದಲ್ಲೂ ಸಂವಿಧಾನ ದಿನವನ್ನ ಆಚರಿಸಲಾಗಿದೆ. ಸಂವಿಧಾನದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸೋಕೆ, ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಯನ್ನ ಪೂರೈಸಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply