ಭಾರತದಲ್ಲಿ ಕೊರೋನಾ ಲಸಿಕೆ ಪಡೆದ ಬಳಿಕ ಮೃತಪಟ್ಟವರೆಷ್ಟು ಗೊತ್ತಾ?

masthmagaa.com:

ದೇಶದಲ್ಲಿ ಜನವರಿ 16ರಿಂದ ಆರಂಭವಾಗಿರೋ ಕೊರೋನಾ ಲಸಿಕೆ ಅಭಿಯಾನದಲ್ಲಿ ಇದುವರೆಗೆ 8,563 ಜನರಿಗೆ ಮಾತ್ರ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದು ಒಟ್ಟು ಲಸಿಕೆ ಪಡೆದವರಲ್ಲಿ 0.2 ಪರ್ಸೆಂಟ್ ಅಷ್ಟೇ. ಅಂದ್ರೆ ತುಂಬಾ ಕಮ್ಮಿ ಅಂತ. ಜೊತೆಗೆ ಲಸಿಕೆಯ ಅಡ್ಡ ಪರಿಣಾಮದಿಂದಾಗಿ 34 ಜನರನ್ನ ಆಸ್ಪತ್ರೆಗೆ ದಾಖಲಿಸುವ ಸನ್ನಿವೇಶ ಸೃಷ್ಟಿಯಾಯ್ತು ಅಂತಾನೂ ಸರ್ಕಾರ ಹೇಳಿದೆ. ಅದೇ ರೀತಿ ಕೊರೋನಾ ಲಸಿಕೆ ಪಡೆದ ಬಳಿಕ 19 ಜನ ಮೃತಪಟ್ಟಿದ್ದಾರೆ. ಆದ್ರೆ ಅವರ ಸಾವಿಗೆ ಲಸಿಕೆ ಕಾರಣ ಅಲ್ಲ ಅಂತ ಸ್ಪಷ್ಟನೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply