ಅಫ್ಘಾನಿಸ್ತಾನದ ಮೇಲಿಂದ ವಿಮಾನ ಹಾರಾಟ ಬೇಡ: ಅಮೆರಿಕ

masthmagaa.com:

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಕಂಟ್ರೋಲ್ ಕೆಲಸ ಮಾಡೋದು ನಿಲ್ಲಿಸಿದೆ. ಹೀಗಾಗಿ ಅಮೆರಿಕದ ನಾಗರಿಕ ವಿಮಾನಗಳು ಭದ್ರತಾ ದೃಷ್ಟಿಯಿಂದ ಅಫ್ಘಾನಿಸ್ತಾನದ ಮೇಲ್ಭಾಗದಿಂದ ಹಾದು ಹೋಗಬಾರದು ಅಂತ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಖುದ್ದು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮಾಹಿತಿ ನೀಡಿದೆ. ಅಂದಹಾಗೆ ಕಳೆದ ತಿಂಗಳು ಕಾಬೂಲ್​​​ ವಿಮಾನ ನಿಲ್ದಾಣದ ಏರ್​ ಟ್ರಾಫಿಕ್ ಕಂಟ್ರೋಲ್ ಜವಾಬ್ದಾರಿಯನ್ನು ಅಮೆರಿಕದ ಸೇನೆ ವಹಿಸಿಕೊಂಡಿತ್ತು. ಆದ್ರೀಗ ಅಮೆರಿಕ ಸೇನೆ ವಾಪಸ್ ಹೋಗಿರೋದ್ರಿಂದ ಕಾಬೂಲ್ ಏರ್​ಪೋರ್ಟ್​ ಕಂಟ್ರೋಲ್ ತಪ್ಪಿದೆ.

-masthmagaa.com

Contact Us for Advertisement

Leave a Reply