ಪ್ರಭಾಸ್‌ “ಪ್ರಾಜೆಕ್ಟ್‌ ಕೆ” ಗೆ ಕಮಲ್‌ ಹಾಸನ್‌ ಎಂಟ್ರಿ!

-masthmagaa.com:

ಪ್ರಾಜೆಕ್ಟ್ ಕೆ ಸಿನಿಮಾ ಕುರಿತು ಇನ್ನೊಂದು ವಿಷಯ ಹೊರಬಿದ್ದಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್‌ ಥ್ರಿಲ್ ಆಗಿದ್ದಾರೆ. ನಾಗ್ ಅಶ್ವಿನ್ ಅವರ ಬಹುನಿರೀಕ್ಷಿತ ಚಿತ್ರ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸ್ತಾ ಇದ್ದಾರೆ. ಈ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಈಗ ಕಮಲ್ ಹಾಸನ್ ಕೂಡಾ ಸೇರಿದ್ದಾರೆ. ಚಿತ್ರತಂಡ ಕಮಲ್ ಹಾಸನ್ ಅವರನ್ನು ವೆಲ್​ಕಮ್ ಮಾಡುವ ಪೋಸ್ಟ್ ಅನ್ನ ಶೇರ್ ಮಾಡಿಕೊಂಡಿದೆ. “ಗ್ರೇಟೆಸ್ಟ್ ನಟ, ಉಲಗನಾಯಗನ್ ಕಮಲ್ ಹಾಸನ್ ಅವರಿಗೆ ಸ್ವಾಗತ. ಈಗ ನಮ್ಮ ಪ್ರಯಾಣ ಯುನಿವರ್ಸಲ್ ಆಗಿದೆ” ಎಂದು ಬರೆದಿದ್ದಾರೆ.

ಪ್ರಾಜೆಕ್ಟ್ ಕೆ ಸಿನಿಮಾ ಸದ್ಯ ಭಾರತದಲ್ಲಿ ನಿರ್ಮಿಸಲಾಗುತ್ತಿರುವ ದುಬಾರಿ ಸಿನಿಮಾ ಆಗಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದಾರೆ. ಸಿನಿಮಾ 2024 ಜನವರಿ 12ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡ್ತಾ ಇದಾರೆ. ಸಿನಿಮಾವನ್ನು ಬರೋಬ್ಬರಿ 500 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ನಿರ್ಮಿಸಲಾಗ್ತಾ ಇದೆ. ಸಲಾರ್ ನಂತರ ಪ್ರಭಾಸ್ ಅಭಿಮಾನಿಗಳು ಪ್ರಾಜೆಕ್ಟ್ ಕೆ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply