ಅಫ್ಘನ್ ಬಿಕ್ಕಟ್ಟಿನ ನಡುವೆ ಕಮಲಾ ಹ್ಯಾರಿಸ್ ಏಷ್ಯಾ ಪ್ರವಾಸ!

masthmagaa.com:

ಅಪ್ಘಾನಿಸ್ತಾನ ಬಿಕ್ಕಟ್ಟಿನ ನಡುವೆಯೇ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಏಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅಫ್ಘಾನಿಸ್ತಾನದಿಂದ 20 ವರ್ಷಗಳ ನಂತರ ಭಾರಿ ಕೋಲಾಹಲದೊಂದಿಗೆ ಅಮೆರಿಕ ಹೊರಹೋಗ್ತಿದೆ. ಇದು ಒಂದು ರೀತಿಯಲ್ಲಿ ಈ ಭಾಗದಲ್ಲಿ ಅಮೆರಿಕದ ಪ್ರಭಾವಕ್ಕೆ ಬಿದ್ದ ಪೆಟ್ಟಾಗಿದೆ. ಅಮೆರಿಕವನ್ನು ಅವಲಂಬಿಸಿರೋ ದೇಶಗಳು ಅಮೆರಿಕವನ್ನು ಅನುಮಾನದಲ್ಲಿ ನೋಡುವಂತಾಗಿದೆ. ಹೀಗಾಗಿ ಈ ಭಾಗದ ದೇಶಗಳ ವಿಚಾರದಲ್ಲಿ ಅಮೆರಿಕದ ಬದ್ಧತೆ ಕುರಿತು ಭರವಸೆ ನೀಡೋದು ಕಮಲಾ ಹ್ಯಾರಿಸ್ ಪ್ರವಾಸದ ಉದ್ದೇಶವಾಗಿದೆ. ಸಿಂಗಾಪುರ್​, ವಿಯೆಟ್ನಾಂಗೆ ಭೇಟಿ ನೀಡಲಿದ್ದು, ಅಮೆರಿಕವನ್ನು ಅವಲಂಬಿಸೋದ್ರಲ್ಲಿ ಎದುರಾಗಿರೋ ಕಳವಳ, ಆತಂಕವನ್ನು ನಿವಾರಿಸಲು ಪ್ರಯತ್ನಿಸಲಿದ್ದಾರೆ.

-masthmagaa.com

Contact Us for Advertisement

Leave a Reply