1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾದ ಕಮಲಾ ಹ್ಯಾರಿಸ್!

masthmagaa.com:

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ 1 ಗಂಟೆ 25 ನಿಮಿಷಗಳವರೆಗೆ ಅಮೆರಿಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಧ್ಯಕ್ಷ ಜೋ ಬೈಡೆನ್​​​ ರೊಟೀನ್ ಮೆಡಿಕಲ್ ಚೆಕಪ್​​ಗಾಗಿ ಅನಸ್ತೇಷಿಯಾಗೆ ಒಳಗಾಗಿದ್ರು. ಇದಕ್ಕೂ ಮುನ್ನ ಅಂದ್ರೆ ಅಮೆರಿಕದ ಟೈಮಿಂಗ್ಸ್​​​ನಲ್ಲಿ ಬೆಳಗ್ಗೆ 10.10ಕ್ಕೆ ಕಮಲಾ ಹ್ಯಾರಿಸ್​​​ಗೆ ಎಲ್ಲಾ ಅಧಿಕಾರವನ್ನು ಹಸ್ತಾಂತರ ಮಾಡಿದ್ರು. ನಂತರ ಅನಸ್ತೇಷಿಯಾದಿಂದ ಹೊರಬಂದ ಬಳಿಕ ಅಂದ್ರೆ 11.35ಕ್ಕೆ ಪುನಃ ಅಧಿಕಾರ ಸ್ವೀಕರಿಸಿದ್ದಾರೆ. ಈ ಅವಧಿಯಲ್ಲಿ ಕಮಲಾ ಹ್ಯಾರಿಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಅಂತ ವೈಟ್ ಹೌಸ್ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಚೆಕಪ್ ಬಗ್ಗೆ ಪ್ರತಿಕ್ರಿಯಿಸಿರೋ ವೈಟ್ ಹೌಸ್ ವೈದ್ಯ ಕೇವಿನ್ ಒ ಕೊನ್ನರ್​​, ಅಧ್ಯಕ್ಷ ಜೋ ಬೈಡೆನ್ ಆರೋಗ್ಯಕರವಾಗಿದ್ದಾರೆ. ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಲು ಶಕ್ತರಾಗಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಒಂದು ವರ್ಷದ ಹಿಂದೆ ಜೋ ಬೈಡೆನ್​​ ನಿಧಾನವಾಗಿ ನಡೆಯೋದು, ಮಾತನಾಡುವಾಗ ಕೆಮ್ಮೋದು ತುಂಬಾ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಇದೇನೂ ಆತಂಕದ ವಿಚಾರವಲ್ಲ. ಹೃದಯ ವೈಫಲ್ಯದ ಸಂಕೇತ ಇಲ್ಲ. ಹಲ್ಲಿನ ಸಮಸ್ಯೆಯಿಲ್ಲ. ಚರ್ಮ, ಕಣ್ಣು ಕೂಡ ಆರೋಗ್ಯಕರವಾಗಿದೆ ಅಂತ ವೈದ್ಯರು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply