“ಕಂಗನಾ ಬಹಳ ಸ್ಟ್ರಾಂಗ್‌ ಮತ್ತು ಬುದ್ಧಿವಂತ ನಟಿ” : ಆರ್‌ ಮಾಧವನ್‌

masthmagaa.com:

ಬಹುಭಾಷಾ ನಟ ಆರ್ ಮಾಧವನ್ ಇತ್ತಿಚೀಗೆ ಸಂದರ್ಶನವೊಂದರಲ್ಲಿ, ತಾವು ಕಂಡ ಸ್ಟ್ರಾಂಗ್‌ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ.

ರೋಹನ್ ದುವಾ ಅವರೊಂದಿಗಿನ ಸಂದರ್ಶನದಲ್ಲಿ, ಮಾಧವನ್ ಕಂಗನಾ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮತ್ತು ಕಂಗನಾ ‘ಫೈಟರ್’ ಆಗಿ ಯಶಸ್ಸನ್ನು ಹೇಗೆ ಗಳಿಸಿದರು ಅನ್ನೋ ಪ್ರಶ್ನೆಗೆ ಉತ್ತರಿಸಿದ್ದಾರೆ ,

“ನನ್ನ ಎಲ್ಲಾ ಚಿತ್ರಗಳ ಎಲ್ಲಾ ನಾಯಕಿಯರನ್ನು ನೀವು ನೋಡಿದರೆ, ಅವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ. ನನ್ನ ಮನೆಯಲ್ಲಿಯೇ ಕೆಲವು ಸ್ಟ್ರಾಂಗ್‌ ಮಹಿಳೆಯರೊಂದಿಗೆ ಬೆಳೆಯುವ ಅದೃಷ್ಟ ನನಗೆ ಸಿಕ್ಕಿದೆ. ನನ್ನ ತಾಯಿ 30 ವರ್ಷಗಳಿಂದ ಬಿಹಾರದ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಮಹಿಳೆಯರು ಸಿಕ್ಕಾಪಟ್ಟೆ ಸ್ಟ್ರಾಂಗ್‌ ಇದಾರೆ. ನಿಮ್ಮ ಅಜ್ಜಿಯರನ್ನು ನೀವು ನೋಡಿದರೆ, ಅದರಲ್ಲಿ ನಿಮ್ಮ ಅಜ್ಜ ನಿಮ್ಮ ಅಜ್ಜಿಯ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ. ಇದಂತೂ ಸತ್ಯ. ಇದು ಎಲ್ಲಾ ಪುರುಷರು ಒಪ್ಪಿಕೊಳ್ಳಲೇಬೇಕು.” ಅಂತ ಹೇಳಿದ್ದಾರೆ.

ಇನ್ನು ಕಂಗನಾ ರಣಾವತ್ ಬಗ್ಗೆ ಮಾತನಾಡಿದ ಮಾಧವನ್‌, ಎಲ್ಲಾ ಸ್ಟ್ರಾಂಗ್‌ ಮಹಿಳೆಯರ ಜೊತೆ ನಾನು ಕೆಲಸ ಮಾಡಿದೀನಿ, ಹಾಗೆ ಕಂಗನಾ ಅವರ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ. ಒಂದೆರೆಡು ಸಿನಿಮಾಗಳಲ್ಲಿ ಕುಣಿದು ಕುಪ್ಪಳಿಸಿ ಮತ್ತೆ ಅದೇ ವ್ಯಕ್ತಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡು ಸುಮ್ಮನೆ ಹೋಗೊ ನಟಿ ಕಂಗನಾ ಅಲ್ಲ. ಕಂಗನಾ ತಮ್ಮ ಸ್ವಂತ ಶಕ್ತಿ, ಅನುಭವ ಮತ್ತು ಸಾಮರ್ಥ್ಯದ ಮೂಲಕ ಗುರುತಿಸಿಕೊಂಡ ನಟಿ. ಇವರು ನಮಗೆಲ್ಲರಿಗಿಂತ ಬುದ್ದಿವಂತರು. ಕಂಗನಾ ಅವರ ಆಕ್ಟಿಂಗ್‌ ನೋಡಿ ನಾನು ಫಿದಾ ಆಗೊಗಿದೀನಿ.”ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply