ಜ್ಯೂ. ಚಿರೂಗೆ ನಾಮಕರಣ ಮಾಡಿದ ಮೇಘನ ರಾಜ್ – ಸರ್ಜಾ ಕುಟುಂಬ; ಹೆಸರು ಏನ್ ಗೊತ್ತಾ?

masthmagaa.com:

ನಟಿ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆ.3, 2021ರಂದು ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಜ್ಯೂ.ಚಿರು ಎಂದೇ ಕರೆಯಲ್ಪಡುತ್ತಿದ್ದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ 10 ತಿಂಗಳ ಮಗನಿಗೆ ‘ರಾಯನ್‌ ರಾಜ್‌ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ನಾಮಕರಣದ ವಿಡಿಯೊವೊಂದನ್ನು ಮೇಘನಾ ರಾಜ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ರಾಯನ್‌ ರಾಜ್‌ ಸರ್ಜಾ– ನಮ್ಮ ಯುವರಾಜ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಚಿರಂಜೀವಿ ಸರ್ಜಾ ಅವರನ್ನೂ ಮೇಘನಾ ನೆನಪಿಸಿಕೊಂಡಿದ್ದಾರೆ.

ಸಂಸ್ಕೃತದಲ್ಲಿ ರಾಯನ್ ರಾಜ್ ಎಂದರೆ ಯುವರಾಜ ಅಂತ ಅರ್ಥ.

– masthmagaa.com

Contact Us for Advertisement

Leave a Reply