ಕರ್ನಾಟಕ: 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ

masthmagaa.com:

ರಾಜ್ಯದ ಸುಮಾರು 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸೋಕೆ ಸರ್ಕಾರ ಮುಂದಾಗಿದೆ. ಈ ಸೆಪ್ಟೆಂಬರ್‌ನಿಂದಲೇ 4 ರಿಂದ 5 ವರ್ಷದ ಮಕ್ಕಳಿಗೆ LKG ಹಾಗೂ UKG ಶಿಕ್ಷಣ ಪ್ರಾರಂಭಿಸಲಾಗುತ್ತದೆ ಅಂತ ಶಿಕ್ಷಣ ಇಲಾಖೆ ಹೇಳಿದೆ. ಅಂಗನವಾಡಿಗಳಲ್ಲಿ ಸರಿಯಾದ ಶಿಕ್ಷಣ ಸಿಗ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೇ ಪ್ರಾರಂಭಿಸಬೇಕು ಅನ್ನೊ ಪೋಷಕರ ಒತ್ತಾಯದ ಮೇರೆಗೆ ಪ್ರಾರಂಭಿಸಲಾಗಿದೆ. ಅಂದ್ಹಾಗೆ ಈಗಾಗಲೇ 276 ಪಬ್ಲಿಕ್‌ ಸ್ಕೂಲ್‌ಗಳು ಸೇರಿದಂತೆ 900 ಶಾಲೆಗಳಲ್ಲಿ LKG ಹಾಗೂ UKG ಪ್ರಾರಂಭಿಸಲಾಗಿದೆ.

-masthmagaa.com

Contact Us for Advertisement

Leave a Reply