ದ್ವಿತೀಯ PUC ಪರೀಕ್ಷೆಗಳು ಕ್ಯಾನ್ಸಲ್! ಇಲ್ಲಿದೆ ಎಲ್ಲಾ ಮಾಹಿತಿ!

masthmagaa.com:

ರಾಜ್ಯದಲ್ಲಿ ಕೋವಿಡ್‌ ಸೋಂಕಿತರು ಹೆಚ್ಚಾಗಿರುವ ಹಾಗೂ ಎರಡನೇ ಅಲೆ ಇರುವ ಕಾರಣ, ದ್ವಿತೀಯ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಿರುವುದಾಗಿ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಪ್ರಥಮ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಎ, ಎ+, ಬಿ, ಬಿ+ ಗ್ರೇಡಿಂಗ್‌ ನೀಡಲಾಗುತ್ತೆ ಅಂತನೂ ಹೇಳಿದ್ದಾರೆ. ಆದ್ರೆ ಯಾವುದಾದ್ರು ವಿದ್ಯಾರ್ಥಿಗೆ ತಮಗೆ ಸಿಕ್ಕ, ಗ್ರೇಡ್‌ಬಗ್ಗೆ ಅಸಮಧಾನ ಇದ್ರೆ ಅಂತಹ ವಿದ್ಯಾರ್ಥಿಗೆ ಕೋವಿಡ್‌ ಬಿಕ್ಕಟ್ಟು ಮುಗಿದ ಮೇಲೆ ಪರೀಕ್ಷೆ ನಡೆಸಲಾಗುವುದು ಅಂತ ಹೇಳಿದ್ದಾರೆ. ಪರೀಕ್ಷೆ ನಡೆಸದರ ಬಗ್ಗೆ ಬೇಸರ ಮಾಡಿಕೊಳ್ಳದೆ ನೀಟ್‌ ಹಾಗೂ ಸಿಇಟಿ ಪರೀಕ್ಷೆಗಳತ್ತ ಹೆಚ್ಚಿನ ಗಮನ ಕೊಟ್ಟು ಓದಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply