ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ಮೀಟಿಂಗ್!

masthmagaa.com:

ಕರ್ನಾಟಕದಲ್ಲಿ ಕೊರೋನಾ ಕೇಸಸ್‌ ದಿಣೇ ದಿನೇ ಹೆಚ್ಚಾಗ್ತ ಇದೆ. ಹೀಗಾಗಿ ಇವತ್ತು ಬಸವರಾಜ್ ಬೊಮ್ಮಾಯಿ ತಮ್ಮ ಮನೆಯಿಂದಲೇ ಕೊರೋನಾ ಪರಿಸ್ಥಿತಿ ಕುರಿತು ವರ್ಚುವಲ್‌ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ನಾಗೇಶ್‌, ಕಂದಾಯ ಸಚಿವ ಆರ್.‌ ಅಶೋಕ್‌, ಡಾ. ಅಶ್ವತ್ಥ್‌ ನಾರಾಯಣ್‌, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ಭಾಗಿಯಾಗಿದ್ರು. ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ್‌ ಲಾಕ್ಡೌನ್‌ ಅಂತು ಇರಲ್ಲ. ಈಗಿರುವ ನಿರ್ಬಂಧಗಳು ಶುಕ್ರವಾರದವರೆಗೆ ಜಾರಿಯಲ್ಲಿರುತ್ತೆ. ಮುಂದೆ ಏನು ಅನ್ನೋದನ್ನ ಶುಕ್ರವಾರ ಸಿ ಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸ್ತೇವೆ ಅಂತ ಹೇಳಿದ್ರು.

ಬಳಿಕ ಮಾತಾಡಿದ ಆರೋಗ್ಯ ಸಚಿವ ಸುಧಾಕರ್ ಕೂಡ ಇದೇ ಮಾತುಗಳನ್ನು ಹೇಳಿದ್ರು. ಜೊತೆಗೆ ಹೋಮ್ ಐಸೋಲೇಷನ್ ನಿಗಾ ಇಡ್ಬೇಕು. ಈ ಮೂಲಕ ಆಸ್ಪತ್ರೆಗೆ ಹೋಗೋರ ಸಂಖ್ಯೆ ಹೆಚ್ಚೋದನ್ನು ತಪ್ಪಿಸಬೇಕು ಅಂತ ಹೇಳಿದ್ರು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಇನ್ನೂ 2ನೇ ಡೋಸ್ ಲಸಿಕೆ ಹಾಕೊಂಡಿಲ್ಲ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ದರ, ಸೋಂಕು ಪ್ರಮಾನ ಕಡಿಮೆನೇ ಇದೆ ಅಂತ ಕೂಡ ತಿಳಿಸಿದ್ರು.

ಇನ್ನು ಕಳೆದ ವಾರ ಕೊರೋನಾಗೆ ತುತ್ತಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಈಗ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply