ಆನ್​ಲೈನ್ ಗೇಮ್ ನಿಷೇಧ ವಿರುದ್ಧ ಕೋರ್ಟ್​ ಮೊರೆ ಹೋದ ಕಂಪನಿಗಳು!

masthmagaa.com:

ರಾಜ್ಯದಲ್ಲಿ‌ ಎಲ್ಲಾ ಬಗೆಯ ಆನ್‌ಲೈನ್‌ ಗೇಮಿಂಗ್‌ ಆಪ್‌ಗಳನ್ನ ಬ್ಯಾನ್‌ ಮಾಡ್ಬೇಕು ಅಂತ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿತ್ತು. ಇದೀಗ ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌, ಗ್ಯಾಲಕ್ಟಸ್‌ ಪೊನ್‌ ವೇರ್‌ ಟೆಕ್ನಾಲಜೀಸ್‌ ಸೇರಿದಂತೆ ಹಲವು ಕಂಪನಿಗಳು ರಾಜ್ಯ ಸರ್ಕಾರದ ಈ ನಿರ್ಧಾರವನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದೆ. ಹಾಗೂ ಇದು ರಾಜ್ಯ ಸರ್ಕಾರದ ಸಂವಿಧಾನ ಬಾಹಿರ ನಿರ್ಧಾರ ಅಂತ ಹೇಳಿದೆ. ಅಕ್ಟೋಬರ್‌ 27 ರಂದು ಈ ಬಗ್ಗೆ ಹೈಕೋರ್ಟ್​​ ಆದೇಶ ಹೊರಡಿಸಲಿದೆ. ಇನ್ನು ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್‌ ಗೇಮ್‌, ಆನ್‌ಲೈನ್‌ ಜೂಜು, ಬೆಟ್ಟಿಂಗ್‌ಗೆ ನಿಷೇಧ ಹೇರಿತ್ತು. ಈ ಹಿಂದೆ ಕೇರಳ ರಾಜ್ಯ ಸರ್ಕಾರ ಆನ್​ಲೈನ್ ರಮ್ಮಿಯನ್ನು ಇದೇ ರೀತಿ ನಿಷೇಧಿಸಿತ್ತು. ಆಗ ಹೈಕೋರ್ಟ್‌ ಈ ನಿರ್ಧಾರ ಸರಿ ಅಲ್ಲ ಅಂತ ರದ್ದು ಮಾಡಿತ್ತು.

-masthmagaa.com

Contact Us for Advertisement

Leave a Reply