ಹೈಕೋರ್ಟ್​​ಗೂ ಕೊರೋನಾ ಕಾಟ! ವಕೀಲರನ್ನು ಹೊರಕಳಿಸಿದ್ಯಾಕೆ ಜಡ್ಜ್​​​..?

masthmagaa.com

ಬೆಂಗಳೂರು: ಮಾಲ್, ಥಿಯೇಟರ್​​​, ಪಬ್, ಕ್ಲಬ್ ಬಳಿಕ ಕರ್ನಾಟಕ ಹೈಕೋರ್ಟ್​​​ಗೂ ಕೊರೋನಾ ಬಿಸಿ ತಾಗಿದೆ. ಇವತ್ತು ಕೋರ್ಟ್​​​​ನ ಹಾಲ್​ ನಂಬರ್ 1ರಲ್ಲಿ ವಕೀಲರೊಬ್ಬರು ಮಾಸ್ಕ್​ ಧರಿಸಿಕೊಂಡು ವಾದ ಮಂಡನೆ ಮಾಡುತ್ತಿದ್ದರು. ಈ ವೇಳೆ ನ್ಯಾಯಾಧೀಶರು, ಮಾಸ್ಕ್​ ಧರಿಸಿ ಯಾಕೆ ವಾದ ಮಂಡಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ರು. ಈ ವೇಳೆ ಸಮಜಾಯಿಷಿ ನೀಡಿದ ವಕೀಲರು, ವಿದೇಶದಿಂದ ಬಂದಿದ್ದ ಸ್ನೇಹಿತರಿಬ್ಬರು ನನ್ನನ್ನು ಭೇಟಿಯಾಗಿದ್ರು. ನಂತರದಲ್ಲಿ ಅವರಿಗೆ ಕೊರೋನಾ ವೈರಸ್ ಇರೋದು ಪತ್ತೆಯಾಗಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಮಾಸ್ಕ್ ಧರಿಸಿ ಬಂದಿದ್ದೇನೆ ಎಂದಿದ್ದಾರೆ. ಆಗ ನ್ಯಾಯಾಧೀಶರು, ನೀವು ವಾದ ಮಂಡಿಸೋದನ್ನು ನಿಲ್ಲಿಸಿ, ಕೂಡಲೇ ಕೋರ್ಟ್​ ಹಾಲ್​​ನಿಂದ ಹೊರಹೋದ್ರೆ ಅದೇ ಮುನ್ನೆಚ್ಚರಿಕೆ ಎಂದಿದ್ದಾರೆ. ಆಗ ವಕೀಲರು ವಾದ ಮಂಡನೆ ನಿಲ್ಲಿಸಿ, ಸೀದಾ ಕೋರ್ಟ್​ ಹಾಲ್​​ನಿಂದ ಹೊರನಡೆದಿದ್ದಾರೆ ಅಂತ ತಿಳಿದುಬಂದಿದೆ.

masthmagaa.com

Contact Us for Advertisement

Leave a Reply