ವಿದೇಶದಲ್ಲೂ ಸದ್ದು ಮಾಡೋಕೆ ಹೊರಟಿದೆ ಕೌಸಲ್ಯ ಸುಪ್ರಜಾ ರಾಮ !

masthmagaa.com:

ಕೌಸಲ್ಯ ಸುಪ್ರಜಾ ರಾಮ ಮೂವಿ ಜುಲೈ 28ಕ್ಕೆ ರಿಲೀಸ್‌ ಆಗೋಕೆ ರೆಡಿಯಾಗಿದೆ. ಚಿತ್ರದ ಡೈರೆಕ್ಟರ್‌ ಶಶಾಂಕ್‌, ಹೀರೋ ಡಾರ್ಲಿಂಗ್‌ ಕೃಷ್ಣ, ಹೀರೋಯಿನ್‌ ಬೃಂದಾ ಆಚಾರ್ಯ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಿಲನಾ ನಾಗರಾಜ್‌ ಅವರು ಪ್ರಮೋಷನ್‌ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಫ್ಯಾಮಿಲಿ ಎಂಟರ್ಟೇನಿಂಗ್‌ ಕತೆಯನ್ನ ಹೊಂದಿರುವ ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ರಿಲೀಸ್‌ ಆಗೋಕೆ ಸಜ್ಜಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಟ್ರೈಲರ್‌ ಮತ್ತು ಸಾಂಗ್‌ಗಳು ಒಳ್ಳೆ ರೆಸ್ಪಾನ್ಸ್‌ನ್ನ ಪಡೆದುಕೊಂಡಿದೆ. ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಪಾಸಿಟಿವ್‌ ರೆಸ್ಪಾನ್ಸ್‌ ಕೊಟ್ಟಿದ್ದಾರೆ. ಡೈರೆಕ್ಟರ್ ಶಶಾಂಕ್ ಅವರೂ ಈ ಸಿನಿಮಾ ಬಗ್ಗೆ ಒಂದು ದೊಡ್ಡ ಹೋಪ್ ಇಟ್ಕೊಂಡಿದ್ದಾರೆ.

ಇನ್ನು ಈ ಸಿನಿಮಾ ಅಮೇರಿಕಾದಲ್ಲೂ ರಿಲೀಸ್‌ ಆಗ್ತಾ ಇದೆ. ಅಮೇರಿಕಾದಲ್ಲಿರುವ ಕನ್ನಡಿಗರಿಗೂ ಕೌಸಲ್ಯ ಸುಪ್ರಜಾ ರಾಮ ಅವರ ಕಥೆಯನ್ನ ತೋರಿಸೋಕೆ ಡೈರೆಕ್ಟರ್ ಪ್ಲಾನ್ ಮಾಡಿದ್ದಾರೆ. ಈಗ ಈ ಸುದ್ದಿ ವೈರಲ್‌ ಆಗಿದೆ. ಅಮೇರಿಕಾ ಮಾತ್ರವಲ್ಲದೇ ಕೆನಡಾದಲ್ಲೂ ಈ ಮೂವಿ ರಿಲೀಸ್‌ ಆಗ್ತಾ ಇದೆ.
ಈ ಮೂಲಕ ಕನ್ನಡದ ಈ ಸಿನಿಮಾ ಎರಡು ದೇಶಗಳಲ್ಲಿ ರಿಲೀಸ್ ಆಗುತ್ತಿರೋದು ಖುಷಿಯನ್ನ ಡೈರೆಕ್ಟರ್ ಶಶಾಂಕ್ ಹೇಳಿದ್ದಾರೆ.

ಈ ಹಿಂದೆ ಕಿಚ್ಚ ಸುದೀಪ್‌ ಅಭಿನಯದ ಬಚ್ಚನ್‌ ಮೂವಿ ನಂತರ ಶಶಾಂಕ್‌ ಅವರ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿದೇಶದಲ್ಲಿ ರಿಲೀಸ್‌ ಆಗ್ತಾ ಇರೋದು.

-masthmagaa.com

Contact Us for Advertisement

Leave a Reply