ದೆಹಲಿ ಆರೋಗ್ಯ ಸಚಿವ ಅರೆಸ್ಟ್ ಆಗ್ತಾರಾ?: ಕೇಜ್ರಿವಾಲ್ ಹೇಳಿದ್ದೇನು?

masthmagaa.com:

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​​ರನ್ನುಜಾರಿ ನಿರ್ದೇಶನಾಲಯ ಅದಿಕಾರಿಗಳು ಸದ್ಯದಲ್ಲೇ ಅರೆಸ್ಟ್​ ಮಾಡಲಿದ್ದಾರೆ ಅಂತ ನನಗೆ ಮೂಲಗಳು ತಿಳಿಸಿವೆ ಅಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಪ್ಲಾನ್ ಮಾಡಲಾಗ್ತಿದೆ. ಆದ್ರೆ ಆಮ್ ಆದ್ಮಿ ಪಕ್ಷದ ನಾಯಕರು ಕಾರ್ಯಕರ್ತರು ಇಂಥಾ ಏಜೆನ್ಸಿಗೆಲ್ಲಾ ಹೆದರಲ್ಲ.. ಯಾಕಂದ್ರೆ ಅವರ್ಯಾರು ತಪ್ಪು ಮಾಡೋದಿಲ್ಲ ಅಂತ ಕೇಜ್ರಿವಾಲ್ ಹೇಳಿದ್ದಾರೆ. ಸತ್ಯೇಂದರ್ ಜೈನ್ ಕೂಡ ಪ್ರತಿಕ್ರಿಯಿಸಿ, ಇಡಿ, ಸಿಬಿಐ ಎಲ್ಲರಿಗೂ ಸ್ವಾಗತ.. ಈ ಹಿಂದೆಯೂ ಎರಡೆರಡು ಬಾರಿ ದಾಳಿ ನಡೆಸಿದ್ರು ಯಾವುದೇ ಪ್ರಯೋಜನವಾಗಲಿಲ್ಲ. ಈಗ ಬಂದು ನನ್ನ ಅರೆಸ್ಟ್ ಮಾಡೋದಾದ್ರೆ ಮಾಡ್ಲಿ ಅಂತ ಸವಾಲು ಹಾಕಿದ್ದಾರೆ.

-masthmagaa.com

Contact Us for Advertisement

Leave a Reply