ಕೊರೋನಾದಲ್ಲಿ ಕರ್ನಾಟಕವನ್ನ ಹಿಂದಿಕ್ಕಿದ ಕೇರಳ

masthmagaa.com:

ಕೊರೋನಾ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕವನ್ನ ಮೀರಿಸಿರೋ ಕೇರಳ ಈಗ 2ನೇ ಸ್ಥಾನಕ್ಕೆ ಹೋಗಿದೆ. ಫಸ್ಟ್ ಪ್ಲೇಸ್​ನಲ್ಲಿ ಮಹಾರಾಷ್ಟ್ರ ಇದೆ. ಇನ್ನೊಂದು ವಿಚಾರ ಅಂದ್ರೆ ನಿನ್ನೆ ದೇಶದಲ್ಲಿ ದೃಢಪಟ್ಟಿದ್ದೇ 12 ಸಾವಿರ ಚಿಲ್ರೆ ಕೊರೋನಾ ಪ್ರಕರಣ. ಅದ್ರಲ್ಲಿ ಅರ್ಧದಷ್ಟು ಅಂದ್ರೆ 6,300ಕ್ಕೂ ಹೆಚ್ಚು ಪ್ರಕರಣ ಕೇರಳದ್ದೇ..

ಕೇರಳ, ಮಹಾರಾಷ್ಟ್ರ ಬಿಟ್ರೆ ಮತ್ತೆಲ್ಲಾ ರಾಜ್ಯಗಳಲ್ಲಿ ಕೊರೋನಾ ಹಾವಳಿ ಕಮ್ಮಿಯಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ದೇಶದ 47 ಜಿಲ್ಲೆಗಳಲ್ಲಿ ಕಳೆದ ಮೂರು ವಾರಗಳಿಂದ ಒಂದೇ ಒಂದು ಕೊರೋನಾ ಪ್ರಕರಣ ದೃಢಪಟ್ಟಿಲ್ಲ. 251 ಜಿಲ್ಲೆಗಳಲ್ಲಿ ಕಳೆದ ಮೂರು ವಾರಗಳಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply