ಬ್ರಿಟನ್‌ ರಾಜ ಕಿಂಗ್‌ ಚಾರ್ಲ್ಸ್‌ಗೆ ಮಹಿಳಾ ʻಅಶ್ವಪಾಲʼರು ನೇಮಕ!

masthmagaa.com:

ಬ್ರಿಟನ್‌ ರಾಜ‌ ಕಿಂಗ್‌ ಚಾರ್ಲ್ಸ್ III ತಮ್ಮ ಮೊದಲ ಮಹಿಳಾ ಇಕ್ವೆರಿ (equerry) ಅಂದ್ರೆ ಸಹಾಯಕರನ್ನ ಅಪಾಯಿಂಟ್‌ ಮಾಡಿದ್ದಾರೆ. ಐತಿಹಾಸಿಕವಾಗಿ ಇಕ್ವೆರಿ ಅಂದ್ರೆ ಅಶ್ವಪಾಲ ಅನ್ನೋ ಅರ್ಥಾನು ಬರುತ್ತೆ. ಆದ್ರೆ ಈಗ ಬ್ರಿಟನ್‌ ರಾಜರ ವಿದೇಶ ಪ್ರವಾಸ ಅಥ್ವಾ ಭೇಟಿಗಳಲ್ಲಿ ಸಹಾಯಕರಾಗಿ.. ಇನ್‌ಫ್ಯಾಕ್ಟ್‌ ಅವರ ಕಣ್ಣು, ಕಿವಿಯಾಗಿ ಇಕ್ವೆರಿ ಕೆಲಸ ಮಾಡಲಿದ್ದಾರೆ. 33 ವರ್ಷದ ಕ್ಯಾಪ್ಟನ್‌ ಕ್ಯಾಟ್‌ ಆಂಡರ್ಸನ್‌ ಅನ್ನೋ ಮಹಿಳೆ ಈ ಹುದ್ದೆಗೆ ಅಪಾಯಿಂಟ್‌ ಆಗಿದ್ದಾರೆ. ಇವ್ರು ಈ ಮೊದಲು ಪಿಎಂ ರಿಷಿ ಸುನಾಕ್‌ರ ಕಛೇರಿಯಲ್ಲಿ ಕೆಲಸ ಮಾಡ್ತಿದ್ರು.

-masthmagaa.com

Contact Us for Advertisement

Leave a Reply