ʻKKR ಮ್ಯಾಚ್‌ ಗೆದ್ದಿರೋದಾʼ ಅಥವಾ ʻಶಾರುಖ್‌ ಹೃದಯ ಗೆದ್ದಿರೋದಾʼ..!

masthmagaa.com:

ಶಾರುಖ್ ಖಾನ್ ಸಿನಿಮಾ ಕ್ಷೇತ್ರದ ದಿಗ್ಗಜರಾದರೆ, ವಿರಾಟ್ ಕೊಹ್ಲಿ ಕ್ರೀಡಾ ಕ್ಷೇತ್ರದ ದಿಗ್ಗಜರು. ಇಬ್ಬರೂ ದೇಶಕ್ಕೆ ಸಾಕಷ್ಟು ಕೀರ್ತಿ ತಂದಿದ್ದಾರೆ. ಇವರಿಬ್ಬರನ್ನೂ ರಾಷ್ಟ್ರದ ದೊಡ್ಡ ಬ್ರ್ಯಾಂಡ್‌ಗಳೆಂದೇ ಕರೆಯಬಹುದು. ಶಾರುಖ್‌ ಹಾಗೂ ವಿರಾಟ್‌ ಒಬ್ಬರಿಗೊಬ್ಬರು ಆತ್ಮೀಯರಾಗಿದ್ದಾರೆ. ಆದರೆ ಈ ಇಬ್ಬರು ಲೆಜೆಂಡ್‌ಗಳ ಅಭಿಮಾನಿಗಳೂ ಮಾತ್ರ ಯಾವಾಗಲೂ ಸೋಷಿಯಲ್‌ ಮೀಡಿಯಾದಲ್ಲಿ ಶಾರುಖ್‌ ಹೆಚ್ಚು ವಿರಾಟ್‌ ಹೆಚ್ಚು ಅಂತಾ ಕಚ್ಚಾಡುತ್ತಿರುತ್ತಾರೆ. ಇದೀಗ ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2023 ಪಂದ್ಯದಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ ಭಾಗಿಯಾಗಿದ್ದರು. KKR, RCB ವಿರುದ್ಧ ಗೆಲುವು ದಾಖಲಿಸಿದ ನಂತರ, ಶಾರುಖ್‌ ಅವರು ಮೈದಾನಕ್ಕೆ ಹೋಗಿ ವಿರಾಟ್‌  ಬಳಿ ಬಂದು ಅಕ್ಕರೆಯಿಂದ ಎರಡು ಕೆನ್ನೆ ಮೇಲೆ ಕೈಯಿಟ್ಟು ಖುಷಿಯಾಗಿ ಮಾತಾಡಿಸಿದ್ರು. ಇದಕ್ಕೆ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ʻಪಿಕ್‌ ಆಫ್‌ ದಿ ಡೇʼ ಹಾಗೂ ʻKKR ಮ್ಯಾಚ್‌ ಗೆದ್ದಿರೋದಾʼ ಅಥವಾ ʻಶಾರುಖ್‌ ಹೃದಯ ಗೆದ್ದಿರೋದಾʼ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply