‘ಲವ್ ಮಾಕ್ಟೇಲ್ 3’ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಕೃಷ್ಣ – ಮಿಲನ ಜೋಡಿ!

masthmagaa.com:

ನಟ ‘ಡಾರ್ಲಿಂಗ್’ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯ ಜೀವನದಲ್ಲಿ ‘ಲವ್ ಮಾಕ್‌ಟೇಲ್’ ಸಿನಿಮಾಗೆ ವಿಶೇಷ ಸ್ಥಾನವಿದೆ. ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶನ ಮಾಡಿ, ಮಿಲನಾ ನಾಗರಾಜ್ ಜೊತೆ ಸೇರಿ ನಿರ್ಮಾಣ ಕೂಡ ಮಾಡಿದ್ದರು. ಈ ಸಿನಿಮಾ ಸಾಕಷ್ಟು ಯಶಸ್ಸು ಕಂಡಿತ್ತು. ‘ಲವ್ ಮಾಕ್‌ಟೇಲ್’ ಸಿನಿಮಾಗೆ ಅದರದ್ದೇ ಆದ ಅಭಿಮಾನಿ ವರ್ಗ ಇದೆ. ‘ಲವ್ ಮಾಕ್‌ಟೇಲ್’ ಹಿಟ್ ಆಗುತ್ತಿದ್ದಂತೆಯೇ, ‘ಲವ್ ಮಾಕ್‌ಟೇಲ್ 2’ ಕೂಡ ಮಾಡಿದ್ರು ಈ ಸಿನಿಮಾ ಸೂಪರ್​ ಹಿಟ್​ ಆದ ನಂತರ ‘ಲವ್​ ಮಾಕ್ಟೇಲ್​ 3’ ಬರುತ್ತಾ ಎಂಬ ಪ್ರಶ್ನೆ ಪ್ರೇಕ್ಷಕರಿಂದ ಕೇಳಿಬರಲು ಆರಂಭಿಸಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟ ಡಾರ್ಲಿಂಗ್ ಕೃಷ್ಣ ಅವರು ಒಂದು ಗುಡ್​ ನ್ಯೂಸ್​ ನೀಡಿದ್ದಾರೆ. ಅವರು ‘ಲವ್​ ಮಾಕ್ಟೇಲ್​ 3’ ಸಿನಿಮಾ ಮಾಡೋದು ಖಚಿತವಾಗಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಲವ್​ ಮಾಕ್ಟೇಲ್​ 3.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಡಾರ್ಲಿಂಗ್​ ಕೃಷ್ಣ ವಿಶ್​ ಮಾಡಿದ್ದಾರೆ. ನಟಿ ಮಿಲನಾ ನಾಗರಾಜ್​ ಕೂಡ ಈ ಪೋಸ್ಟ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಅಲ್ಲದೆ, ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಆ ಸಿನಿಮಾ ಕೊಟ್ಟಷ್ಟು ಸಕ್ಸಸ್ ಯಾವುದೂ ಕೊಟ್ಟಿರಲಿಲ್ಲ. ಹೀಗಾಗಿ ಮತ್ತೆ ತಮ್ಮ ಸಕ್ಸಸ್ ಫಾರ್ಮುಲಾ ಹಿಂದೆ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply