ಕನ್ನಡ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ!

masthmagaa.com:

ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ 2022 ಹಾಗೂ 2023ರ ಸಾಲಿನ ಚುನಾವಣೆ ಕಳೆದ ತಿಂಗಳ 12ರಂದು‌ ನಡೆದಿತ್ತು. ಇದೀಗ ವಿಜೇತರಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸೋಮಶೇಖರ್ ಎಸ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚಲುವರಾಜು.ಎಸ್ ಮತ್ತು ರಮೇಶ್ ಬಿ.ಜಿ, ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಬಿ.ಜಿ, ಸಹಕಾರ್ಯದರ್ಶಿ ಆಗಿ ನರಸಿಂಹ ಹೆಚ್, ನರೇಶ್ ಕುಮಾರ್ ಆರ್ ಹಾಗೂ ಶಶಿಧರ್ ಜಿ, ಖಂಜಾಚಿಯಾಗಿ ಸುನಿಲ್ ಕುಮಾರ್ ಬಿ.ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದ ಪದಾಧಿಕಾರಿಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

-masthmagaa.com

Contact Us for Advertisement

Leave a Reply