ಮತ್ತೊಮ್ಮೆ ಬೆಳಕಿಗೆ ಬಂತು ಎಚ್‌ಡಿ ಕುಮಾರಸ್ವಾಮಿಯ ಪೆನ್‌ಡ್ರೈವ್‌ ಸ್ಟೋರಿ! ಮತ್ತೆ ಏನಾಯ್ತು?

masthmagaa.com:

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಪೆನ್‌ಡ್ರೈವ್‌ನ್ನ ಸಾಕ್ಷಿಯಾಗಿ ಪ್ರದರ್ಶನ ಮಾಡಿದ್ದ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಅಮೃತೇಶ್‌ ಅನ್ನೋ ವಕೀಲರು ಮಾಜಿ ಮುಖ್ಯಮಂತ್ರಿ ಪೆನ್‌ಡ್ರೈವ್‌ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡ್ತಾ ಇದ್ದಾರೆ ಅಂತ ದೂರು ಸಲ್ಲಿಸಿ ಕ್ರಮ ಜರುಗಿಸುವಂತೆ ಕೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದವರು. ಈಗ ಚನ್ನಪಟ್ಟಣದ ಶಾಸಕರಾಗಿದ್ದಾರೆ. ಅವರು ಸಾರ್ವಜನಿಕ ಸೇವೆಯಲ್ಲಿರೋ ವ್ಯಕ್ತಿ. ಇಂಥ ವ್ಯಕ್ತಿಯೊಬ್ಬ ಕಾಂಗ್ರೆಸ್‌ ಸರ್ಕಾರದ ಮೇಲೆ ಭಷ್ಟಚಾರದ ಆರೋಪವನ್ನ ಮಾಡಿ, ಸಾಕ್ಷ್ಯವಾಗಿ ಪೆನ್‌ಡ್ರೈವ್‌ನ್ನ ತೋರಿಸಿದ್ದಾರೆ. ಇದೀಗ ಆರೋಪದ ಸಾಕ್ಷ್ಯಗಳನ್ನ ಬಹಿರಂಗಪಡಿಸದೇ ಪೆನ್‌ಡ್ರೈವ್‌ನ್ನ ತಮ್ಮ ಬಳಿಯೇ ಇಟ್ಟುಕೊಂಡಿರೋದು ಅಪರಾಧ. ಇದನ್ನ ಬಹಿರಂಗ ಮಾಡಿ ಇಲ್ಲವಾದಲ್ಲಿ ಲೋಕಾಯುಕ್ತಕ್ಕೆ ಒಪ್ಪಿಸಿ ಅಂತ ಕುಮಾರಸ್ವಾಮಿಯವರಿಗೆ 2 ತಿಂಗಳ ಹಿಂದೆ ಲೀಗಲ್‌ ನೋಟಿಸ್‌ ನೀಡಿದ್ರೂ ಅವ್ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ರಿಂದ ಪೊಲೀಸ್‌ ಠಾಣೆಗೆ ಈ ಕುರಿತು ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಹೇಳಿರೋದಾಗಿ ವಕೀಲ ಅಮೃತೇಶ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

Contact Us for Advertisement

Leave a Reply