ಲಖೀಂಪುರ್​​​ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಮಗ ಜೈಲುಪಾಲು!

masthmagaa.com:

ಲಖೀಂಪುರ್​ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರೋ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿನ್ನೆ ಸತತ 12 ಗಂಟೆಗಳ ಕಾಲ ಆಶಿಶ್ ಮಿಶ್ರಾ ವಿಚಾರಣೆ ನಡೆಸಲಾಯ್ತು. ಆದ್ರೆ ಈ ವೇಳೆ ಆಶಿಶ್ ಮಿಶ್ರಾ ವಿಚಾರಣೆಯಲ್ಲಿ ಸರಿಯಾಗಿ ಸಹಕಾರ ನೀಡಿರಲಿಲ್ಲ. ಘಟನೆ ವೇಳೆ ಎಲ್ಲಿದ್ರು ಅನ್ನೋ ಬಗ್ಗೆ ಸರಿಯಾಗಿ ಮಾಹಿತಿ ನೀಡ್ಲಿಲ್ಲ. ಕಳೆದ ಭಾನುವಾರ ಹಿಂಸಾಚಾರ ನಡೆದ ಸಮಯದಲ್ಲಿ ನಾನು ಕುಸ್ತಿ ಪಂದ್ಯಾವಳಿಯಲ್ಲಿದ್ದೆ ಅಂತ ಆಶಿಶ್ ಮಿಶ್ರಾ ಹೇಳಿದ್ರು. ಆದ್ರೆ ಪೊಲೀಸರು ವಿಚಾರಿಸಿದಾಗ ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಪಂದ್ಯಾವಳಿ ನಡೆದ ಸ್ಥಳದಲ್ಲಿ ಅಶಿಶ್ ಮಿಶ್ರಾ ಇರಲಿಲ್ಲ ಅಂತ ಗೊತ್ತಾಗಿದೆ. ಅಂದಹಾಗೆ ಲಖೀಂಪುರ್​​​​ಕೇರಿ ಹಿಂಸಾಚಾರ ನಡೆದಿದ್ದು ಕೂಡ ಇದೇ ಅವಧಿಯಲ್ಲಿ.. ಇನ್ನೊಂದು ವಿಚಾರ ಅಂದ್ರೆ ಅದೇ ಸಮಯದಲ್ಲಿ ಆಶಿಶ್ ಮಿಶ್ರಾ ಮೊಬೈಲ್ ಲೊಕೇಷನ್ ಕೂಡ ಹಿಂಸಾಚಾರ ನಡೆದ ಜಾಗದ ಸುತ್ತಮುತ್ತ ತೋರಿಸ್ತಿದೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ ಆ ಟೈಮಲ್ಲಿ ನಾನು ಹಿಂಸಾಚಾರ ನಡೆದ ಜಾಗಕ್ಕೆ ಹತ್ತಿರದಲ್ಲಿರೋ ರೈಸ್ ಮಿಲ್​ಗೆ ಬಂದಿದ್ದೆ ಅಂತ ಜಾರಿಕೊಂಡಿದ್ದಾರೆ ಆಶಿಶ್ ಮಿಶ್ರಾ.. ಹೀಗೆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದ ಕಾರಣ ಆಶಿಶ್ ಮಿಶ್ರಾರನ್ನು ಅರೆಸ್ಟ್ ಮಾಡಲಾಗಿತ್ತು.

ಕಳೆದ ಭಾನುವಾರ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಕಾರು ಹರಿಸಲಾಗಿತ್ತು. ಇದ್ರಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಪ್ರಾಣ ಕಳ್ಕೊಂಡಿದ್ರು. ನಂತರ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿಗರು ಸಾವನ್ನಪ್ಪಿದ್ರು. ಈ ಸಂಬಂಧ ಪ್ರತಿಭಟನಾಕಾರರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ.

ಇನ್ನು ಲಖೀಂಪುರ್​ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಪ್ರಿಯಾಂಕ ಗಾಂಧಿ ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಘಟನೆ ನಡೆದ ಬಳಿಕ ಈವರೆಗೆ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕನೂ ಇಲ್ಲಿಗೆ ಬಂದಿಲ್ಲ. ಪ್ರಧಾನಿ ಮೋದಿ ಲಕ್ನೋಗೆ ಬಂದ್ರೂ ಲಖೀಂಪುರ್​ಖೇರಿಗೆ ಬಂದಿಲ್ಲ ಅಂತ ಕೆಂಡಕಾರಿದ್ದಾರೆ.

-masthmagaa.com

Contact Us for Advertisement

Leave a Reply