ಮೋದಿಗೆ ಕುಟುಂಬವಿಲ್ಲ ಅಂದ ಲಾಲು: ಭಾರತವೇ ನನ್ನ ಕುಟುಂಬವೆಂದ PM!

masthmagaa.com:

ಪ್ರಧಾನಿ ಮೋದಿ ಹಿಂದೂನೇ ಅಲ್ಲ ಅಂತ RJD ನಾಯಕ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ. ಕುಟುಂಬ ರಾಜಕಾರಣದ ವಿರುದ್ದ ಮಾತಾಡೋಕೆ ನರೇಂದ್ರ ಮೋದಿ ಯಾರು? ಮೋದಿ ಅವ್ರಿಗೆ ಕುಟುಂಬವೇ ಇಲ್ಲ. ಅವ್ರಿಗೆ ಮಕ್ಕಳಿಲ್ಲ ಅಂದ್ರೆ ನಾವೇನು ಮಾಡೋಕ್ಕಾಗಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಹೆತ್ತವರು ಸತ್ತಾಗ ತಲೆ ಮತ್ತು ಗಡ್ಡ ಬೋಳಿಸಬೇಕು. ಆದ್ರೆ ಅವ್ರ ತಾಯಿ ಸತ್ತಾಗ ಮೋದಿ ಹಾಗೇ ಮಾಡ್ಲಿಲ್ಲ. ಹೀಗಾಗಿ ಅವ್ರು ಹಿಂದೂನೇ ಅಲ್ಲ ಅಂತ ಲಾಲು ಹೇಳಿದ್ದಾರೆ. ಲಾಲು ಹೇಳಿಕೆಗೆ ರಿಯಾಕ್ಟ್‌ ಮಾಡಿರೋ ಪಿಎಂ ಮೋದಿ, ʻ140 ಕೋಟಿ ಭಾರತೀಯರೆ ನನ್ನ ಕುಟುಂಬಸ್ಥರು ಅಂತ ಕೌಂಟರ್ ಕೊಟ್ಟಿದ್ದಾರೆ. ಜೊತೆಗೆ, ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಸಾರ್ವಜನಿಕರ ಕಲ್ಯಾಣಕ್ಕಾಗಿ ಸೇವಕನಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನಾನು ಚಿಕ್ಕವನಿದ್ದಾಗ ದೇಶಕ್ಕಾಗಿ ಬದುಕಬೇಕು ಅನ್ನೊ ಕನಸಿನ ಮೂಟೆ ಹೊತ್ತು ಮನೆಯನ್ನೇ ಬಿಟ್ಟೆ ಅಂತೇಳಿದ್ದಾರೆ. ಅಲ್ದೇ ಸುಳ್ಳು ಹೇಳೋದು ಮತ್ತು ಲೂಟಿ ಮಾಡೋದೆ ಅವ್ರ ಪ್ರಮುಖ ಲಕ್ಷಣಗಳಾಗಿವೆ ಅಂತ ಲಾಲು ಹಾಗೂ ನೆಹರು-ಗಾಂಧಿ ಕುಟುಂಬದ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ಇನ್ನು ಅದೇ ವೇದಿಕೆಯಲ್ಲಿದ್ದ ತೆಲಂಗಾಣದ ಸಿಎಂ ರೇವಂತ್‌ ರೆಡ್ಡಿ ಪ್ರಧಾನಿ ಮೋದಿಯವ್ರನ್ನ ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ನಮ್ಮ ದೊಡ್ಡ‍ಣ್ಣ ಅಂತೇಳಿದ್ದಾರೆ. ಅಲ್ದೇ ಕೇಂದ್ರದ 5 ಟ್ರಿಲಿಯನ್‌ ಆರ್ಥಿಕತೆ ಹೊಂದುವ ಗುರಿಗೆ ತೆಲಂಗಾಣ ಕೂಡ ತನ್ನದೇ ಆದ ಕೊಡುಗೆ ನೀಡಲಿದೆ. ಹೀಗಾಗಿ ಗುಜರಾತ್‌ನಂತೆ ತೆಲಂಗಾಣದ ಅಭಿವೃದ್ದಿಗೂ ಆಶೀರ್ವಾದ ಹಾಗೂ ಬೆಂಬಲ ನೀಡುವಂತೆ ಪ್ರಧಾನಿಯವ್ರನ್ನ ರೇವಂತ್‌ ವಿನಂತಿಸಿದ್ದಾರೆ.
-masthmagaa.com

Contact Us for Advertisement

Leave a Reply