ಪುಲ್ವಾಮಾ ದಾಳಿಯ ಹಿಂದಿದ್ದ ಕೊನೆಯ ಉಗ್ರ ಮಟಾಷ್!

masthmagaa.com:

ಪುಲ್ವಾಮಾ ದಾಳಿಗೆ ಕೈ ಜೋಡಿಸಿದ್ದ ಕೊನೆಯ ಉಗ್ರನನ್ನು ಹೊಡೆದುರುಳಿಸಲಾಗಿದೆ. ಈ ದಾಳಿಯಲ್ಲಿ ಸಿಆರ್​ಪಿಎಫ್​​ನ 40 ಮಂದಿ ಯೋಧರು ಪ್ರಾಣ ಕಳ್ಕೊಂಡಿದ್ರು. ಇದಾದ ಬಳಿಕ ಈ ಇಡೀ ಪ್ಲಾನ್​​ನಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರನ್ನ ಹೊಡೆದುರುಳಿಸಲಾಗಿತ್ತು. ಇದೀಗ ಬದುಕುಳಿದಿದ್ದ ಕೊನೆಯ ಉಗ್ರನನ್ನು ಕೂಡ ಹೊಡೆಯಲಾಗಿದೆ. 3 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಎನ್​​ಕೌಂಟರ್​ನಲ್ಲಿ 6 ಮಂದಿ ಜೈಷ್ ಉಗ್ರರು ಪ್ರಾಣ ಬಿಟ್ಟಿದ್ರು. ಅದ್ರಲ್ಲಿ ಒಬ್ಬನಾದ ಸಮೀರ್ ದರ್ ಪುಲ್ವಾಮಾ ದಾಳಿಯ ಹಿಂದಿದ್ದ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply