ವಾಹನಗಳಿಗೆ ಬರಲಿದೆ ಭಾರತೀಯ ಸಂಗೀತ ವಾದ್ಯದ ಹಾರ್ನ್​​!

masthmagaa.com:

ನಮ್ಮ, ನಿಮ್ಮ ವಾಹನಗಳ ಹಾರ್ನ್​ನಲ್ಲಿ ಇನ್ಮುಂದೆ ಪೀಂ ಪೀಂ, ಪಾಂ ಪಾಂ, ಕೀಂ ಕೀಂ ಸೌಂಡ್​ ಹೋಗಿ ಡುಮ್​ಟಕ ಡುಮ್​ಟಕದಂತಹ ಶಬ್ದ ಬರೋ ಸಾಧ್ಯತೆ ಇದೆ. ವಾಹನಗಳ ಹಾರ್ನ್​ನಲ್ಲಿ ಭಾರತೀಯ ಸಂಗೀತ ವಾದ್ಯಗಳಾದ ಕೊಳಲು, ತಬಲ ಪಿಟೀಲು, ಹಾರ್ಮೋನಿಯಂ ಮುಂತಾದ ಶಬ್ದಗಳನ್ನ ಕಡ್ಡಾಯಗೊಳಿಸುವ ಕಾನೂನನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸ್ತಿದೆ ಅಂತ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದರ ಜೊತೆಗೆ ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನಗಳ ಸೈರನ್​ ಶಬ್ದವನ್ನ ಆಕಾಶವಾಣಿಯ ಶಬ್ದದಿಂದ ರಿಪ್ಲೇಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಇದು ಕೇಳೋಕೆ ಹಿತವಾಗಿರುತ್ತೆ. ಆದ್ರೆ ಈಗಿರೋ ಸೈರನ್ ಶಬ್ದ ತುಂಬಾ ಇರಿಟೇಟ್​ ಮಾಡುತ್ತೆ. ಇದರಿಂದ ಕಿವಿಗೂ ಸಮಸ್ಯೆ ಆಗುತ್ತೆ. ಹೀಗಾಗಿ ಆ್ಯಂಬುಲೆನ್ಸ್, ಪೊಲೀಸ್​ ವಾಹನಗಳ ಸೈರನ್ ಶಬ್ದವನ್ನ ಬದಲಿಸಲು ಚಿಂತನೆ ನಡೆಸ್ತಿದ್ದೇವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply