HALನ ನೂತನ ತೇಜಸ್‌ MK-1A ಯುದ್ದವಿಮಾನದ ಹಾರಾಟ ಯಶಸ್ವಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ HALನ ನೂತನ ತೇಜಸ್‌ MK-1A ಯುದ್ದವಿಮಾನದ ಮೊದಲ ಹಾರಾಟ ಕಾರ್ಯಾಚರಣೆ ಬೆಂಗಳೂರಿನಲ್ಲಿ ನಡೆದಿದೆ. ನಿವೃತ್ತ ಚೀಫ್‌ ಟೆಸ್ಟ್‌ ಪೈಲಟ್ ಗ್ರೂಪ್‌ ಕ್ಯಾಪ್ಟನ್‌, ಕೆಕೆ ವೇಣುಗೋಪಾಲ್‌ ನೇತೃತೃದಲ್ಲಿ 18 ನಿಮಿಷಗಳ ಕಾಲ ಈ ತೇಜಸ್‌ MK-1A ಯಶಸ್ವಿ ಹಾರಾಟ ನಡೆಸಿದೆ. ಏರ್‌ಕ್ರಾಫ್ಟ್‌ನ LA5033 ಶ್ರೇಣಿಯ ವಿಮಾನದ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ವಾಯುಸೇನೆಗೆ ಇನ್ನಷ್ಟು ಬಲ ಸಿಗೋ ಸೂಚನೆ ಸಿಕ್ಕಿದೆ. ಅಂದ್ಹಾಗೆ ಕಳೆದ ನವೆಂಬರ್‌ನಲ್ಲಿ ನ್ಯಾಷನಲ್‌ ಏರೋಸ್ಪೇಸ್‌ ಲಾಬೋರೇಟರಿ ಮತ್ತು ಕೌನ್ಸಿಲ್‌ ಆಫ್‌ ಸೈನ್ಸ್‌ ಆಂಡ್‌‌ ಇಂಡಸ್ಟ್ರಿಯಲ್ ರಿಸರ್ಚ್(‌CSIR) ಮಧ್ಯೆ ಈ ವಿಮಾನ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದ್ರಂತೆ ಈಗ ಈ ವಿಮಾನ ರೆಡಿಯಾಗಿ ಮೊದಲ ಹಾರಾಟವನ್ನ ಸಹ ಯಶಸ್ವಿಯಾಗಿ ನಡೆಸಿದೆ. 2021ರಲ್ಲಿ 83 MK-1A ವಿಮಾನಗಳ ನಿಯೋಜನೆಗೆ ಸುಮಾರು 48 ಸಾವಿರ ಕೋಟಿ ಮೌಲ್ಯದ ಪ್ರಾಜೆಕ್ಟ್‌ನ್ನ HALಗೆ ನೀಡಲಾಗಿದೆ. ಇನ್ನು ಈ ವರ್ಷ 3 ವಿಮಾನಗಳು ಸೇನೆ ಸೇರಿಕೊಳ್ಳೋ ನೀರೀಕ್ಷೆ ಇದೆ. ಹಳೆಯ ತೇಜಸ್‌ MK-1ಗೆ ಹೋಲಿಸಿದ್ರೆ, ಈ ಸುಧಾರಿತ MK-1Aನಲ್ಲಿ, ಸುಧಾರಿತ AESA ರೆಡಾರ್‌, ಹೈ ಪರ್ಫಾರ್ಮೆನ್ಸ್‌ ಫ್ಲೈಟ್‌ ಕಂಟ್ರೋಲ್‌ ಕಂಪ್ಯೂಟರ್‌ ಸಿಸ್ಟಮ್, ಹೊಸ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸೂಟ್‌, ಅಪ್‌ಡೇಟೆಡ್‌ ಏವಿಯಾನಿಕ್ಸ್‌ ಸಿಸ್ಟಮ್‌ಗಳಿವೆ.

-masthmagaa.com

Contact Us for Advertisement

Leave a Reply