ಚೀನಾದಲ್ಲಿ 10 ದಿನದಲ್ಲಿ ಕಟ್ಟಿದ್ದ ಕೊರೋನಾ ಆಸ್ಪತ್ರೆ ಬಂದ್..!

masthmagaa.com:

ಚೀನಾದ ವುಹಾನ್​ ನಗರದಲ್ಲಿ ಕೇವಲ 10 ದಿನಗಳಲ್ಲಿ ನಿರ್ಮಿಸಿದ್ದ ಲೇಶೆನ್​ಶಾನ್ ಕೊರೋನಾ ಆಸ್ಪತ್ರೆ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು. ಸದ್ಯ ಈ ಆಸ್ಪತ್ರೆಯಿಂದ ಕೊನೆಯ ರೋಗಿ ಡಿಸ್ಚಾರ್ಜ್ ಆದ ಬೆನ್ನಲ್ಲೇ ಆಸ್ಪತ್ರೆಯನ್ನ ಬಂದ್ ಮಾಡಲಾಗಿದೆ.

ವುಹಾನ್​ನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗಿತ್ತು. ಒಂದು ಆಸ್ಪತ್ರೆ ನಿರ್ಮಾಣಕ್ಕೆ ನೂರಾರು ಜೆಸಿಬಿಗಳು ಒಟ್ಟಿಗೆ ಕೆಲಸ ಮಾಡಿದ್ದ ಫೋಟೋಗಳು ವೈರಲ್ ಆಗಿದ್ದವು. ಬಳಿಕ ಜನವರಿ 25ರಂದು ಆಸ್ಪತ್ರೆಯನ್ನ ಓಪನ್ ಮಾಡಲಾಗಿತ್ತು.

ಸದ್ಯ ಆಸ್ಪತ್ರೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸ್ಟ್ಯಾಂಡ್​ಬೈನಲ್ಲಿ ಇಡಲಾಗಿದೆ. ಈ ಆಸ್ಪತ್ರೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇದರಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಗಂಭೀರವಾಗಿತ್ತು. ಇದರಲ್ಲಿ 1900ಕ್ಕೂ ಹೆಚ್ಚು ರೋಗಿಗಳು ಡಿಸ್ಚಾರ್ಜ್​ ಆಗಿ ಹೋಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿನ ರೋಗಿಗಳ ಸಂಖ್ಯೆ ಶೂನ್ಯಕ್ಕೆ ಇಳಿದಿರೋದು ಮಹತ್ವದ ವಿಚಾರ ಅಂತ ಆಸ್ಪತ್ರೆ ಅಧ್ಯಕ್ಷ ವಾಂಗ್ ಕ್ಸಿನುವಾನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply