“ಲೆಟ್ಸ್ ಗೆಟ್ ಮ್ಯಾರೀಡ್‌”: ಪೋಸ್ಟರ್‌ ರಿಲೀಸ್‌ ಮಾಡಿದ ಧೋನಿ

masthmagaa.com:

ಭಾರತದ ಮಾಜಿ ನಾಯಕ ಮತ್ತು ದೇಶದ ಅಗ್ರಗಣ್ಯ ಕ್ರಿಕೆಟಿಗರಲ್ಲಿ ಒಬ್ಬರಾದ ಎಂಎಸ್ ಧೋನಿ ತಮ್ಮ ಮೊದಲ ನಿರ್ಮಾಣದ ಚಲನಚಿತ್ರವನ್ನ ಘೋಷಿಸಿದ್ದಾರೆ. ಅವರ ಮೊದಲ ಸಿನಿಮಾ ತಮಿಳಿನಲ್ಲಿ ಚಿತ್ರೀಕರಣವಾಗುತ್ತಿದ್ದು, ಸಾಕ್ಷಿ ಧೋನಿ ಈ ಚಿತ್ರದ ಕತೆಯನ್ನ ಬರೆದಿದ್ದಾರೆ. ಚಿತ್ರದ ಹೆಸರು LGM ಅಥವಾ ಲೆಟ್ಸ್ ಗೆಟ್ ಮ್ಯಾರೀಡ್‌. ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಚಿತ್ರದ ಪೋಸ್ಟರ್‌ನ್ನ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿದ ಧೋನಿ “#LGM – ಲೆಟ್ಸ್ ಗೆಟ್ ಮ್ಯಾರೀಡ್‌ನ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್‌ ಮಾಡಿದಕ್ಕೆ ಸಂತೋಷವಾಗಿದೆ. ಕುಟುಂಬದ ಜೊತೆ ಸಿನಿಮಾ ನೋಡಿ ಎಂಜಾಯ್‌ ಮಾಡೋಕೆ ರೆಡಿಯಾಗಿರಿ, ಇಡೀ ತಂಡಕ್ಕೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಾಯಕನಾಗಿ ಹರೀಶ್ ಕಲ್ಯಾಣ್, ನಾಯಕಿಯಾಗಿ ಇವಾನಾ ಮತ್ತು ಹಿರಿಯ ನಟಿ ನದಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸುತ್ತಿದ್ದು, ಕಾಮಿಡಿ ಕೌಟುಂಬಿಕ ಕಥಾ ಹಂದರ ಈ ಚಿತ್ರಕ್ಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಇನ್ನು ಧೋನಿ ಅಭಿಮಾನಿಗಳಂತೂ ಫುಲ್‌ ಖುಷ್‌ ಆಗಿದ್ದಾರೆ. ಪೋಸ್ಟರ್‌ ನೋಡ್ತಾ ಇದ್ದಂತೆ ಶುಭಾಷಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.

-masthmagaa.com

Contact Us for Advertisement

Leave a Reply