ಪಾಕ್‌ ನವಾಜ್‌ ಶರೀಫ್‌ ಚುನಾವಣಾ ರ‍್ಯಾಲಿಗೆ ವ್ಯಾಘ್ರಗಳ ಪ್ರಚಾರ!

masthmagaa.com:

ಈ ಪಾಕಿಸ್ತಾನದಲ್ಲಿ ಒಂದಷ್ಟು ವಿಚಿತ್ರ ರಾಜಕಾರಣಿಗಳಿದ್ದಾರೆ. ಎಲೆಕ್ಷನ್‌ ಬಂತು ಅಂದ್ರೆ ಅವರ ವಿಚಿತ್ರ ಬುದ್ದಿ ಅಥವಾ ಅದನ್ನ ಕ್ರಿಯೇಟಿವಿಟಿ ಅಂತಿರೋ ಬೇರೇ ಏನಾದ್ರೂ ಹೇಳ್ತಿರೋ ಅದು ನಿಮಗೆ ಬಿಟ್ಟಿದ್ದು. ಆ ಸುಡುಗಾಡು ಕ್ರಿಯೇಟಿವಿಟಿ ಈಗ ನೆಕ್ಸ್ಟ್‌ ಲೆವೆಲ್‌ಗೆ ಹೋಗಿದೆ. ಏನಾಗಿದೆ ಅಂದ್ರೆ ಪಾಕಿಸ್ತಾನದಲ್ಲಿ ನಡೆಯೋ ಎಲೆಕ್ಷನ್‌ಗೆ ಅಲ್ಲಿನ ಇಂಪಾರ್ಟೆಂಟ್‌ ಪಕ್ಷವೊಂದು ಪ್ರಚಾರಕ್ಕೆ ಅಂತ…. ಹುಲಿ ಮತ್ತು ಸಿಂಹವನ್ನ ಎಳ್ಕೊಂಡು ಬಂದಿದಾರೆ. ಪಾಕ್‌ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಅವರ ರ‍್ಯಾಲಿಯಲ್ಲಿ ಪಕ್ಷದ ಬೆಂಬಲಿಗರು ನಿಜವಾದ ಸಿಂಹ ಮತ್ತು ಹುಲಿಯನ್ನೇ ಕರ್ಕೊಂಡು ಬಂದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ʻನಮ್ಮ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಪಕ್ಷದ ಗುರುತೇ ಈ ಪ್ರಾಣಿಗಳು. ಆದ್ರಿಂದ ನಮ್ಮ ಪಕ್ಷವನ್ನ ಪ್ರತಿನಿಧಿಸೋಕಂತ ಸಿಂಹ ಮತ್ತು ಹುಲಿಗಳನ್ನ ಕರ್ಕೊಂಡ್‌ ಬಂದಿದ್ದೀವಿ ಅಂತ ಹೇಳಿದ್ದಾರಂತೆ. ಇನ್ನು ಈ ವೇಳೆ ಅಲ್ಲಿದ್ದ ನವಾಜ್‌ ಶರೀಫ್‌ ಬೆಂಬಲಿಗರು ಕೇಜ್‌ ಒಳಗಿದ್ದ ಸಿಂಹ ಮತ್ತು ಹುಲಿಗಳ ಜೊತೆ ಸೆಲ್ಫಿ ತೆಗೆದ್ಕೊಂಡಿದ್ದಾರೆ. ಆದ್ರೆ ಪಕ್ಷದ ಬೆಂಬಲಿಗರ ನಡೆಯನ್ನ ನವಾಜ್‌ ಶರೀಫ್‌ ಟೀಕಿಸಿದ್ದು ಕೂಡಲೇ ಪ್ರಾಣಿಗಳನ್ನ ವಾಪಾಸ್‌ ಬಿಟ್ಟು ಬರೋಕೆ ಸೂಚನೆ ನೀಡಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.. ನಮ್‌ ದೇಶದಲ್ಲಿ ಆಕಾಶನಾ ಅಂಗೈಲಿ ತೋರಿಸಿ ವೋಟ್‌ ಕೇಳಿದ್ರೆ ಈ ಪಾಕಿಸ್ತಾನದಲ್ಲಿ ಹುಲಿ ಸಿಂಹ ತೋರಿಸಿ ವೋಟ್‌ ಕೇಳ್ತಿದ್ದಾರೆ. ಬಹುಶಃ ಹುಲಿ ಸಿಂಹ ನೋಡೋಕಾದ್ರೂ ಜನ ಬರ್ತಾರೆ ಅನ್ನೋ ಸ್ಟ್ರಾಟಜಿ ಇರಬೋದು ಅನ್ನೋದು ಪಾಕ್‌ ನಾಯಕರ ಲೆಕ್ಕಚಾರ ಇರಬೋದು. ಹಾಗ್‌ ನೋಡಿದ್ರೆ ಈ ರೀತಿ ಮಾಡ್ತಿರೋದು ಮೊದಲ ಬಾರಿ ಅಲ್ಲ. ಈ ಹಿಂದೆ ಕೂಡ ಬೇಕಾದಷ್ಟು ಪ್ರಾಣಿಗಳನ್ನ ಝೂನಿಂದ ಬಿಡಿಸಿಕೊಂಡು ಬಂದು ರ‍್ಯಾಲಿಯಲ್ಲಿ ಬಳಸಿಕೊಂಡಿದ್ದಾರೆ. ಝೂನಿಂದ ಬಾಡಿಗೆಗೆ ಪ್ರಾಣಿಗಳನ್ನ ತಗೊಂಡು ಬಳಸಿಕೊಳ್ಳೋಕೂ ಅಲ್ಲಿ ಅವಕಾಶ ಇದೆಯಂತೆ.

-masthmagaa.com

Contact Us for Advertisement

Leave a Reply