ಲೋಕಸಭಾ ಅಖಾಡ: ಸದ್ಯದಲ್ಲೆ ರಾಜ್ಯದ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ!

masthmagaa.com:

ಲೋಕಸಭೆ ಎಲೆಕ್ಷನ್‌ಗಾಗಿ ರಾಜ್ಯದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೆಲವೇ ದಿನಗಳಲ್ಲಿ ಹೊರ ಬೀಳೊ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಡಿಸಿಎಂ ಡಿಕೆ ಶಿವಕುಮಾರ್‌, ನಾಳೆ ದೆಹಲಿಯಲ್ಲಿ ಟಿಕೆಟ್‌ ಸಂಬಂಧ ಸಭೆ ನಡೆಯಲಿದ್ದು ಶೀಘ್ರವೇ ರಾಜ್ಯದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತೆ ಅಂತೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಇನ್ನೆರಡು ದಿನಗಳಲ್ಲಿ ಕೈ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ ಅಂತ ಹೇಳಿದ್ದಾರೆ. ಅತ್ತ ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕ್ಯಾಂಡಿಡೇಟ್‌ಗಳ ಲಿಸ್ಟ್‌ ಈ ವಾರವೇ ಫೈನಲ್‌ ಆಗಲಿದೆ ಅಂತ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply