ಮ್ಯಾನ್ಮಾರ್ ಸೇನಾ ಕ್ಷಿಪ್ರಕ್ರಾಂತಿಗೆ 1 ವರ್ಷ.. ಜಗತ್ತು ಕೈ ಕಟ್ಟಿ ಕೂತಿರೋದೇಕೆ?

masthmagaa.com:

ಮ್ಯಾನ್ಮಾರ್​ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ಆಗಿದೆ. ಕಳೆದ ವರ್ಷ ಇದೇ ದಿನ ಆಂಗ್ ಸಾನ್​ ಸೂ ಕಿ, ಅವರ ಪಕ್ಷದ ಪ್ರಮುಖ ನಾಯರು ಮತ್ತು ಮ್ಯಾನ್ಮಾರ್​​ ಅಧ್ಯಕ್ಷ ವಿನ್ ಮಿಂಟ್​ ನಿವಾಸಗಳ ಮೇಲೆ ಸೇನೆ ರೇಡ್​ ಮಾಡಿ, ಅವರನ್ನ ವಶಕ್ಕೆ ಪಡೆದು ತುರ್ತುಪರಿಸ್ಥಿತಿ ಘೋಷಿಸಿತ್ತು. ಈ ಮೂಲಕ ಎಲ್ಲಾ ಅಧಿಕಾರವನ್ನ ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿತ್ತು ಮ್ಯಾನ್ಮಾರ್ ಸೇನೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅನ್ನೋ ಕಾರಣಕ್ಕೆ ಹೀಗೆ ಮಾಡಿದ್ದೀವಿ ಅಂತ ಸೇನೆ ಹೇಳ್ತು. ಸೇನಾ ಕ್ಷಿಪ್ರ ಕ್ರಾಂತಿ ವಿರುದ್ಧ ಭಾರಿ ಪ್ರತಿಭಟನೆ, ಹಿಂಸಾಚಾರ ಎಲ್ಲಾ ನಡೀತು. ಸೇನೆ ವಿರುದ್ಧ ತಿರುಗಿಬಿದ್ದವರ ಮೇಲೆ ಗುಂಡು ಹಾರಿಸಲಾಯ್ತು, ಪ್ರತಿಭಟನೆಯನ್ನ ಹತ್ತಿಕ್ಕಲಾಯ್ತು. ಈಗಲೂ ನಾಗರಿಕರು, ಪ್ರತಿಭಟನಾಕಾರರು, ರಾಜಕಾರಣಿಗಳ ಮೇಲೆ ದಾಳಿಗಳು ನಡೀತಾ ಇದೆ. ಇದೀಗ ಮ್ಯಾನ್ಮಾರ್​ ಸೇನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕು ಅನ್ನೋ ಕೂಗು ಜೋರಾಗಿದೆ. ಪ್ರಮುಖವಾಗಿ 2020ರ ಚುನಾವಣೆ ಗೆದ್ದೋರು ಮಾಡಿಕೊಂಡಿರೋ ನ್ಯಾಷನಲ್​ ಯುನಿಟಿ ಗವರ್ನಮೆಂಟ್​​, ನಮ್ಮ ಸ್ಥಿತಿಯನ್ನ ಜಗತ್ತು ಕೂತ್ಕೊಂಡು ನೋಡ್ತಿದೆ ಬಿಟ್ರೆ ಮತ್ತೇನೂ ಮಾಡ್ತಿಲ್ಲ ಅಂತ ಅಸಮಾಧಾನ ಹೊರಹಾಕಿದೆ.

-masthmagaa.com

Contact Us for Advertisement

Leave a Reply