ರಷ್ಯಾ ಯುದ್ಧದಲ್ಲಿ ಯುಕ್ರೇನ್‌ ಅಪಾಯದಲ್ಲಿದೆ‌ ಅಂದ ಅಮೆರಿಕ!

masthmagaa.com:

ರಷ್ಯಾ ಜೊತೆಗಿನ ಯುದ್ಧದಲ್ಲಿ ಯುಕ್ರೇನ್‌ ಅಪಾಯದ ಅಂಚಿನಲ್ಲಿದೆ ಅಂತ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸ್ಟಿನ್‌, ಯುಕ್ರೇನ್‌ಗೆ ಯುದ್ಧದಲ್ಲಿ ಆಯುಧ, ಮಿಲಟರಿ ಅಗತ್ಯ ತುಂಬಾನೆ ಇದೆ, ಸಧ್ಯ ಅವರು ಈಗ ಕ್ರಿಟಿಕಲ್‌ ಕಂಡಿಷನ್‌ನಲ್ಲಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಯುಕ್ರೇನ್‌ ಉಳಿವಿಗಾಗಿ ಅಗತ್ಯ ನೆರವು ನೀಡಬೇಕು ಅಂತ ಹೇಳಿದ್ದಾರೆ. ಈ ಮೂಲಕ ಯುಕ್ರೇನ್‌ನ್ನ ಈಗ ಅಮೆರಿಕ ಕೂಡ ಕೈ ಬಿಟ್ಟಂತಾಗಿದೆ. ಯಾಕಂದ್ರೆ ಯುದ್ಧ ಸ್ಟಾರ್ಟ್‌ ಆದಾಗ ಅಮೆರಿಕ ಸಾಕಷ್ಟು ಹೆಲ್ಪ್‌ ಮಾಡಿತ್ತು. ಯುಕ್ರೇನ್‌ ಸೋಲೋಕೆ ಬಿಡಲ್ಲ ಅಂತೇಳಿತ್ತು. ಆದ್ರೆ ಈಗ ಅವರು ಅಪಾಯಕ್ಕೆ ಸಿಲುಕಿದ್ದಾರೆ ಅಂತೇಳಿದೆ. ಅಂದ್ಹಾಗೆ ಅಮೆರಿಕ ಈಗ ಯುಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸೊದನ್ನ ಸ್ಟಾಪ್‌ ಮಾಡಿದೆ. ಹೀಗಾಗಿ ಅಲ್ಲಿ ತುಂಬಾ ಸಮಸ್ಯೆ ಆಗ್ತಿದೆ ಅಂತಲೂ ಯುರೋಪ್‌ ಮಾಧ್ಯಮಗಳು ವರದಿಗಳನ್ನ ಬಿತ್ತರಿಸ್ತಿವೆ.

-masthmagaa.com

Contact Us for Advertisement

Leave a Reply