ಜಾಸ್ತಿ ಫಾಲ್ಲೋವರ್ಸ್‌ ಇರುವ ಕನ್ನಡದ ಹೀರೊ ಇವರೇ ನೋಡಿ !

masthmagaa.com:

ಒಂದ್‌ ಕಾಲ ಇತ್ತು, ನಮ್ಮ ಫೇವರೇಟ್‌ ಹೀರೊಗಳನ್ನ ಅಥ್ವಾ ಹೀರೊಯಿನ್‌ಗಳನ್ನ ಮೀಟ್‌ ಮಾಡ್ಬೇಕು ಅಥ್ವಾ ಮಾತಾಡ್ಬೇಕು ಅಂದ್ರೆ ಹರಸಾಹಸ ಪಡಬೇಕಿತ್ತು. ಆದರೆ, ಈಗ ಟೆಕ್ನಿಕ್‌ಗಳು ಅಪ್‌ಗ್ರೇಡ್ ಆಗುತ್ತಿದೆ ಮತ್ತು ಇಂದು ನಾವು ಡಿಜಿಟಲ್ ಜಗತ್ತಿನಲ್ಲಿ ಇದೀವಿ. ಇಲ್ಲಿ ನಾವು ನಮ್ಮ ನೆಚ್ಚಿನ ತಾರೆಯರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಪ್ರಶ್ನೆಗಳನ್ನು ಕೇಳಬಹುದು. ಇದೆಲ್ಲಾ ನಮಗೆ ಸೋಷಿಯಲ್‌ ಮೀಡಿಯಾದಿಂಧ ಸಾಧ್ಯವಾಗಿದೆ. ನಾವೂ ಡೈಲಿ ಅವರನ್ನ ನೋಡಬಹುದು, ಅವರ ಲೈಫ್‌ ಸ್ಟೈಲ್‌ ಬಗ್ಗೆ ತಿಳಿದುಕೊಳ್ಳಬಹುದು, ಅವರಿಗೆ ಏನ್‌ ಇಷ್ಟ ಏನ್‌ ಕಷ್ಟ ಅನ್ನೊದರ ಬಗ್ಗೆ ತಿಳ್ಕೊಳ್ಳ್‌ಬಹುದು. ನಮ್ಮ ಫೇವರೇಟ್‌ ಹೀರೊಗಳನ್ನ ನಾವು ಫಾಲೊ ಮಾಡೊ ಮುಖಾಂತರ ಅವರು ಎಲ್ಲಿಗ್‌ ಹೋಗ್ತಾರೆ, ಏನ್‌ ಮಾಡ್ತಾರೆ, ಅವರ ಫ್ಯಾಮಿಲಿ ಹೇಗಿದೆ, ಅವರ ಮಕ್ಕಳು ಹೇಗಿದಾರೆ, ಎಲ್ಲದರ ಬಗ್ಗೆ ತಿಳ್ಕೊಳ್ಳೊಕೆ ನಮಗೆ ಸಹಾಯ ಮಾಡೋದೆ ಸೋಷಿಯಲ್‌ ಮೀಡಿಯಾ . ಕನ್ನಡದ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ಟಚ್‌ಲ್ಲಿ ಇರಬೇಕು ಅಂತ Instagram, Twitter, Facebook ನಂತಹ ಸೋಷಿಯಲ್‌ ಮೀಡಿಯಾಗಳನ್ನು ಬಳಸುತ್ತಾರೆ. ಅವರು ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ತಮ್ಮ ಕೆಲಸದ ನ್ಯೂ ಅಪ್‌ಡೇಟ್‌ಗಳ ಬಗ್ಗೆ ಟ್ರಾವೆಲಿಂಗ್‌ ಬಗ್ಗೆ, ತಮ್ಮ ಫ್ಯಾಮಿಲಿ ಬಗ್ಗೆ ಮಾಹಿತಿ ನೀಡ್ತಾರೆ. ಹಾಗಾಗಿಯೇ ಲಕ್ಷಗಟ್ಟಲೆ ಫಾಲೋವರ್ಸ್‌ ಅವರಿಗೆ ಇರ್ತಾರೆ ಇವತ್ತಿನ ಈ ವರದಿಯಲ್ಲಿ ಜಾಸ್ತಿ ಪಾಲ್ಲೋವರ್ಸ್‌ ನಮ್ಮ ಕನ್ನಡ ಚಿತ್ರರಂಗದ ಯಾವ ಹೀರೋಗೆ ಇದಾರೆ ಅಂತ ನೋಡಿ.

1. ಯಶ್‌ : ಪ್ಯಾನ್‌ ಇಂಡಿಯಾ ಸ್ಟಾರ್‌ ಅಂತಾನೇ ಫೇಮಸ್‌ ಆಗಿರುವ ಯಶ್‌ ಅವರು ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಫ್ಯಾಮಿಲಿ ಫೋಟೊಸ್‌, ಮಕ್ಕಳ ತುಂಟಾಟದ ವೀಡಿಯೋಗಳನ್ನೇ ಜಾಸ್ತಿ ಶೇರ್‌ ಮಾಡಿಕೊಳ್ತಾರೆ. ಕೆಜಿಎಫ್1 ಮತ್ತು 2 ಯಶಸ್ಸಿನೊಂದಿಗೆ ಯಶ್ ರಾಷ್ಟ್ರಮಟ್ಟದಲ್ಲಿ ಸ್ಟಾರ್‌ಡಮ್‌ಗೆ ಏರಿದರು. ಕೆಜಿಎಫ್‌ ಸಿನಿಮಾದಿಂದ ಅವರ ಜನಪ್ರಿಯತೆಯೊಂದಿಗೆ ಅವರ ಫಾಲೊರ್ಸ್‌ಗಳ ಸಂಖ್ಯೆಯು ಕೂಡ ಹೆಚ್ಚಾಯಿತು. ಇವರಿಗೆ 13.7ಮಿ (1ಕೋಟಿ 37 ಲಕ್ಷ ) ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಇದಾರೆ. ಇನ್ನು ಫೆಸ್ಬು‌ಕ್‌ನಲ್ಲಿ 8.6ಮಿ ( 86ಲಕ್ಷ ) ಫಾಲೋವರ್ಸ್‌ ಇದಾರೆ. ಟ್ವಿಟ್ಟರ್‌ನಲ್ಲಿ 1.3ಮಿ ( 13 ಲಕ್ಷ) ಫಾಲೋವರ್ಸ್‌ ಇದಾರೆ. ಇವರು ಸೋಷಿಯಲ್‌ ಮೀಡಿಯಾದಲ್ಲಿ ಜಾಸ್ತಿ ಆಕ್ಟೀವ್‌ ಇರೋದಿಲ್ಲ, ಆದರೂ ಇವರಿಗೆ ಜಾಸ್ತಿ ಫಾಲೋವರ್ಸ್‌ ಇದಾರೆ. ಸದ್ಯಕ್ಕೆ ಕನ್ನಡ ಫಿಲ್ಮ ಇಂಡಸ್ಟ್ರಿಯಲ್ಲಿ ಇವರೇ ಹೈಯಸ್ಟ್‌ ಫಾಲೋವರ್ಸ್‌ ಹೊಂದಿರುವ ನಟ.

2. ಧೃವ ಸರ್ಜಾ: ಸೌತ್ ಆಕ್ಷನ್ ಸ್ಟಾರ್ ಅರ್ಜುನ್ ಸರ್ಜಾ ಅವರ ಸೋದರಳಿಯ ಧ್ರುವ ಸರ್ಜಾ 2012 ರಲ್ಲಿ ಬಿಡುಗಡೆಯಾದ ಅದ್ಧೂರಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಆ ಸಿನಿಮಾ ಬ್ಲಾಕ್ ಬಸ್ಟರ್ ಆಯಿತು. ನಂತರ, ಅವರು ಸತತ ಎರಡು ಹಿಟ್‌ಗಳನ್ನು ನೀಡಿದರು ಮತ್ತು ಕನ್ನಡ ಚಲನಚಿತ್ರ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾದರು. ಇಲ್ಲಿಯವರೆಗೆ, 3.2ಮಿ ( 32 ಲಕ್ಷ ) ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ನ್ನ ಹೊಂದಿದ್ದಾರೆ. ಇವರದ್ದು ಫೇಸ್‌ಬುಕ್‌ ಖಾತೆ ಇಲ್ಲ. 388.8ಕೆ ( 3 ಲಕ್ಷದ 88 ಸಾವಿರ) ಟ್ವಿಟ್ಟರ್‌ನಲ್ಲಿ ಫಾಲೊವರ್ಸ್‌ ಇದಾರೆ.

3. ಪುನೀತ್‌ ರಾಜಕುಮಾರ್:‌ ಕರ್ನಾಟಕ ರತ್ನ, ಡಾ. ಪುನೀತ್‌ ರಾಜಕುಮಾರ್‌ ಅವರ ತಮ್ಮ ಹೊಸ ಚಿತ್ರದ ಅಪ್‌ಡೆಟ್‌ಗಳನ್ನ ಸೋಷಿಯಲ್‌ ಮಿಡೀಯಾ ಮುಖಾಂತರ ತಮ್ಮ ಅಭಿಮಾನಿಗಳಿಗೆ ಕೊಡ್ತಿದ್ರು. ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2 ಮಿ (20 ಲಕ್ಷ) ಫಾಲೊವರ್ಸ್‌ಗಳನ್ನ ಪಡೆದಿದ್ದಾರೆ. ಫೆಸ್ಬು‌ಕ್‌ನಲ್ಲಿ 2.1ಮಿ ( 21ಲಕ್ಷ) ಫಾಲೊವರ್ಸ್‌ ಇದಾರೆ. ಇನ್ನು ಟ್ವಿಟ್ಟರ್‌ನಲ್ಲಿ 404.7ಕೆ ( 4 ಲಕ್ಷದ 4 ಸಾವಿರದ 700 ) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಇವರ ಲಾಸ್ಟ್‌ ಫೊಸ್ಟ್‌ ಗಂಧದ ಗುಡಿ ಚಿತ್ರ ರಿಲೀಸ್‌ ಆಗುವ ಹಿಂದಿನ ದಿನ ಬಂದಿತ್ತು. ಇವರಿಗೆ ಮರಣದ ನಂತರ ಡಾಕ್ಟರೇಟ್‌ ಪದವಿ, ಮತ್ತು ಕರ್ನಾಟಕ ರತ್ನ ನೀಡಿ ಗೌರವ ಸೂಚಿಸಲಾಯಿತು. ಅಕ್ಟೋಬರ್‌ 27 2021 ಕ್ಕೆ ಇವರು ಗಂಧದ ಗುಡಿ ಬಗ್ಗೆ ಕ್ಲ್ಯೂ ಕೊಟ್ಟು ಒಂದು ಫೊಸ್ಟ್‌ನ್ನ ಶೇರ್‌ ಮಾಡಿದ್ರು, ಇದಾದ ನಂತರ ಅಕ್ಟೋಬರ್‌ 27 2022 ಕ್ಕೆ ಗಂಧದ ಗುಡಿಯ ಇನ್ನೋಂದು ಜಲಕ್‌ ಇವರ ಅಕೌಂಟಿಂದ ಶೇರ್‌ ಆಗಿತ್ತು . ಈ ಒಂದು ವಿಡೀಯೋ ಅಭಿಮಾನಿಗಳಲ್ಲಿ ನಿಜವಾಗ್ಲೂ ಅಪ್ಪು ಅವ್ರು ಮತ್ತೆ ಬದುಕಿ ಬಂದಿದ್ದಾರೆ ಅಂತ ಮತ್ತೆ ಸೂಚನೆ ಕೊಟ್ಟಂತೆ ಇತ್ತು.

4. ಸುದೀಪ್‌ : ‘ಕಿಚ್ಚ’ ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹು ಮುಖ ಹಾಗೂ ಬಹು ಭಾಷಾ ಪ್ರತಿಭೆ ಅಂತಾನೆ ಹೇಳಬಹುದು. ನಿರ್ದೇಶನ, ಬರಹಗಾರ, ಗಾಯನ,ನಟನೆ ಎಲ್ಲದಕ್ಕೂ ಸೈ ಎನ್ನುವ ಕಿಚ್ಚ ಸುದೀಪ್‌ ಬಿಗ್‌ಬಾಸ್‌ನಲ್ಲಿ ಕೂಡ ಯಶಸ್ವಿ ನಿರೂಪಕರ ಅಂತ ಹೆಸರು ಮಾಡಿದ್ದಾರೆ. ಇವರು ಬಾಸ್ ಶೋನಲ್ಲಿ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿರುವುದನ್ನು ನೋಡಿದ್ರೆ ಗೊತ್ತಾಗತ್ತೆ ಇವರದು ಸರಳ ವ್ಯಕ್ತಿತ್ವ ಅಂತ. ಇವರ ಸ್ಟೈಲ್‌ ಮತ್ತು ಡ್ರೆಸ್‌ ಸೆನ್ಸ್‌ಗೆ ಫಿದಾ ಆಗದೇ ಇರೋರೆ ಇಲ್ಲ. ಯಾವಾಗಲೂ ಯುನಿಕ್‌ ಆಗಿ ಮತ್ತು ಸ್ಟೈಲಿಷ್‌ ಕಾಸ್ಟ್ಯೂಮ್‌ಗಲ್ಲಿ ಕಾಣಿಸ್ತಾರೆ. ಇವರು ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ 1.9ಮಿ (19 ಲಕ್ಷ ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ. ಫೆಸ್ಬು‌ಕ್‌ನಲ್ಲಿ 62ಕೆ ( 62 ಸಾವಿರ) ಫಾಲೋವರ್ಸ್‌ ಇದಾರೆ.ಟ್ವಿಟ್ಟರ್‌ನಲ್ಲಿ ಸ್ವತಃ ಟ್ವೀಟ್‌ ಮಾಡುವ ಇವರಿಗೆ 2.8ಮಿ ( 28 ಲಕ್ಷ ) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಫೂಂಕ್, ಫೂಂಕ್ 2, ರಕ್ತಚರಿತ , ರಕ್ತಚರಿತ -2 ಹಾಗೂ ದಬ್ಬಂಗ್-3 ಸಿನಿಮಾಗಳಲ್ಲಿ ನಟಿಸಿದ್ದು, ಬಾಲಿವುಡ್ ಅಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದರು. ಬಳಿಕ ಅಮಿತಾಭ್ ಬಚ್ಚನ್ ಅವರೊಂದಿಗೆ ‘ರಣ್‌’ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು.

5. ದರ್ಶನ್‌ : ಡಿ ಬಾಸ್‌, `ಬಾಕ್ಸ್‌ಆಫೀಸ್ ಸುಲ್ತಾನ’,`ದಾಸ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್‌ ಅವರು ತಮ್ಮ ಖಡಕ್‌ ಮಾತುಗಳಿಂದ ಅಭಿಮಾನಿಗಳಿಗೆ ಮತ್ತೂ ಹತ್ತಿರ ಆದ್ರು. `ಮೆಜೆಸ್ಟಿಕ್’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 1.6ಮಿ ( 16ಲಕ್ಷ) ಫಾಲೋವರ್ಸ್‌ಗಳನ್ನ ಪಡೆದಿದ್ದಾರೆ. ಫೆಸ್ಬು‌ಕ್‌ನಲ್ಲಿ 1.9ಮಿ ( 19 ಲಕ್ಷ) ಫಾಲೊವರ್ಸ್‌ ಇದಾರೆ. ಟ್ವಿಟ್ಟರ್‌ನಲ್ಲಿ 1.1ಮಿ ( 11 ಲಕ್ಷ ) ಫಾಲೊವರ್ಸ್‌ ಇದಾರೆ. ಡಾ. ರಾಜ್‌ಕುಮಾರ್‌ ಅಭಿಮಾನಿಗಳನ್ನೇ ದೇವರು ಅಂತ ಕರೆದ್ರು, ಅಭಿಮಾನಿಗಳಿಗೋಸ್ಕರ ಅಂತಾನೆ ಟ್ಯಾಟು ಹಾಕಿಸಿಕೊಂಡ ಮೊದಲ ಹೀರೋ ದರ್ಶನ್‌. ಅಂಬರೀಷ್‌, ವಿಷ್ಣುವರ್ಧನ್‌, ಶಿವಣ್ಣ, ಪುನೀತ್‌ ರಾಜ್‌ಕುಮಾರ್‌ , ಮುಂತಾತ ದೊಡ್ಡ ದೊಡ್ಡ ಹೀರೊಗಳ ಜೊತೆ ಕೂಡ ಆಕ್ಟ್‌ ಮಾಡಿದ್ದಾರೆ.

6. ರಕ್ಷಿತ್‌ ಶೆಟ್ಟಿ: ಸ್ಯಾಂಡಲ್‌ವುಡ್‌ನ ಸಿಂಪಲ್‌ ಸ್ಟಾರ್‌ ಎಂದೇ ಖ್ಯಾತಿಯ ತುಳುನಾಡಿನ ರಕ್ಷಿತ್‌ ಶೆಟ್ಟಿ, ಕಿರಿಕ್‌ ಪಾರ್ಟಿಯ ಮೂಲಕ ಎಲ್ಲಾ ಕನ್ನಡಿಗರ ಮನದಲ್ಲಿ ಭರವಸೆಯ ನಟ ಅಂತ ಫಿಕ್ಸ್‌ ಆಗಿಬಿಟ್ಟರು. ಭಾರತೀಯ ಪೌರಾಣಿಕ ಕಥೆಗಳಲ್ಲಿ ಹೆಚ್ಚು ಆಸಕ್ತಿ ಇರುವ ರಕ್ಷಿತ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.1ಮಿ ( 11 ಲಕ್ಷ ) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಫೆಸ್ಬು‌ಕ್‌ನಲ್ಲಿ 1.4ಮಿ ( 14 ಲಕ್ಷ ) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಇನ್ನು ಟ್ವಿಟ್ಟರ್‌ನಲ್ಲಿ 718.3ಕೆ (7 ಲಕ್ಷದ 18 ಸಾವಿರದ 300) ಫಾಲೋವರ್ಸ್‌ಗಳನ್ನ ಪಡೆದಿದ್ದಾರೆ. ಇವರು ಮಧ್ಯದಲ್ಲಿ ತಮ್ಮ ಎಲ್ಲಾ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳನ್ನ ಡಿಆಕ್ಟೀವೇಟ್‌ ಮಾಡಿದ್ರು. ಸ್ವಲ್ಪ ದಿನಗಳು ಕಳೆದ ಮೇಲೆ ಮತ್ತೆ ಆಕ್ಟೀವೇಟ್‌ ಮಾಡಿ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ.

7.ಜಗ್ಗೇಶ್‌ : ನವರಸನಾಯಕನೆಂದೇ ಖ್ಯಾತಿಯಾಗಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, `ಭಂಡ ನನ್ನ ಗಂಡ’ ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಇವರು ತಮ್ಮ ನ್‌ಸ್ಟಾಗ್ರಾಮ್‌ನಲ್ಲಿ 1ಮಿ ( 10 ಲಕ್ಷ )ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಇನ್ನು ಟ್ವಿಟ್ಟರ್‌ನಲ್ಲಿ 851.5ಕೆ ( 8 ಲಕ್ಷದ 51 ಸಾವಿರದ 500)ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ.

8. ಶ್ರೀಮುರುಳಿ: ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ. `ಸದಾ ನಿಮ್ಮೊಂದಿಗೆ’ ಎಂಬ ಚಾರಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತನ ಕುಟುಂಬವೊಂದಕ್ಕೆ ಆಸರೆಯಾಗಲು ಮುರಳಿ ಸಾಮಾನ್ಯ ಜನರಂತೆ ರಸ್ತೆ ಪಕ್ಕದಲ್ಲಿ ಕಬ್ಬಿನ ಹಾಲು ಮಾರಾಟ ಮಾಡಿದ್ದ ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 953ಕೆ ( 9 ಲಕ್ಷದ 53 ಸಾವಿರ ) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಫೆಸ್ಬು‌ಕ್‌ನಲ್ಲಿ 1.6ಮಿ (16 ಲಕ್ಷ )ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಇನ್ನು ಟ್ವಿಟ್ಟರ್‌ನಲ್ಲಿ 462.8ಕೆ ( 4 ಲಕ್ಷದ 62 ಸಾವಿರದ 800) ಜನರನ್ನ ಹೊಂದಿದ್ದಾರೆ.

9. ಗಣೇಶ್‌ : ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಮುಂಗಾರು ಮಳೆಯ ಮೂಲಕ ಸೆನ್ಷೇಷನ್‌ ಕ್ರೀಯೆಟ್‌ ಮಾಡಿದ ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 918ಕೆ ( 9 ಲಕ್ಷದ 18 ಸಾವಿರ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ. ಫೆಸ್ಬು‌ಕ್‌ನಲ್ಲಿ 1.3ಮಿ ( 13 ಲಕ್ಷ ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ. ಟ್ವಿಟ್ಟರ್‌ನಲ್ಲಿ 343.2ಕೆ ( 3ಲಕ್ಷ 43 ಸಾವಿರದ 200) ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ.

10. ಉಪೇಂದ್ರ: ವಲ್ಟ್ಸ್‌ ಬೆಸ್ಟ್‌ ಡೈರೆಕ್ಟರ್‌ ಲಿಸ್ಟ್‌ನಲ್ಲಿ 17ನೇ ಸ್ಥಾನದಲ್ಲಿರುವ ಉಪೇಂದ್ರ ಅವರು ತಮ್ಮ ಯುನಿಕ್‌ ಆಕ್ಟಿಂಗ್‌ ಮತ್ತು ಡೈರೆಕ್ಷನ್‌ ಮೂಲಕ ಜನರಿಗೆ ಹತ್ತಿರವಾದ್ರು. ಉಪ್ಪಿ ತರ ಬೇರೆ ಯಾರೂ ಡೈರೆಕ್ಷನ್‌ ಮಾಡೋಕೆ ಸಾದ್ಯಾನೆ ಇಲ್ಲ ಅಂತ ಫೇಮಸ್‌ ಆಗಿರುವ ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 820ಕೆ ( 8 ಲಕ್ಷದ 20ಸಾವಿರ ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ. ಫೆಸ್ಬು‌ಕ್‌ನಲ್ಲಿ 456ಕೆ ( 4 ಲಕ್ಷದ 56ಸಾವಿರ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ. ಇನ್ನು ಟ್ವಿಟ್ಟರ್‌ನಲ್ಲಿ 1.2ಮಿ ( 12 ಲಕ್ಷ ) ಫಾಲೊವರ್ಸ್‌ಗಳನ್ನ ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply