ಅಯೋಧ್ಯೆ ಭೂಮಿ ಖರೀದಿಯಲ್ಲಿ ಅವ್ಯವಹಾರ! ಪ್ರಿಯಾಂಕ ಹೇಳಿದ್ದೇನು?

masthmagaa.com:

ಅಯೋಧ್ಯೆ ರಾಮಮಂದಿರ ಜಮೀನು ಖರೀದಿ ವೇಳೆ ಭ್ರಷ್ಟಚಾರ ನಡೆದಿದೆ ಅಂತ ಆರೋಪಿಸಿರೋ ಪ್ರಿಯಾಂಕಾ ಗಾಂಧಿ ಇವತ್ತು ಅದಕ್ಕೆ ಸಾಕ್ಷ್ಯಗಳನ್ನು ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ರಾಮಮಂದಿರಕ್ಕಾಗಿ ಸಂಗ್ರಹಿಸಿದ ಚಂದಾ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ. ಅದಕ್ಕೆ ಸಾಕ್ಷಿ ಜಮೀನು ಖರೀದಿಯಲ್ಲಿ ನಡೆದಿರೋ ಅವ್ಯವಹಾರ ಅಂತ ಹೇಳಿದ್ದಾರೆ. ಈ ಬಗ್ಗೆ ನಾವು ಈ ಹಿಂದೆಯೇ ಹೇಳಿದ್ವಿ. ಆದ್ರುನೂ ಇವತ್ತು ಪ್ರಿಯಾಂಕ ಏನ್ ಹೇಳಿದ್ರು ಅಂತ ನೋಡೋಣ..

ಪ್ರಿಯಾಂಕಾ ಗಾಂಧಿ ಆರೋಪವೇನು?
2017ರಲ್ಲಿ ವ್ಯಕ್ತಿಯೊಬ್ಬರು ಒಂದು ಜಮೀನನ್ನು 2 ಕೋಟಿ ರೂಪಾಯಿಗೆ ತಗೊಂಡ್ರು. 2021ರಲ್ಲಿ ಆ ಜಮೀನಿನ ಅರ್ಧ ಭಾಗವನ್ನು ರಾಮಮಂದಿರ ಟ್ರಸ್ಟ್​​ಗೆ 8 ಕೋಟಿ ರೂಪಾಯಿಗೆ ಮಾರಿದ್ರು. ಇದಾದ 19 ನಿಮಿಷಗಳ ಬಳಿಕ ಜಮೀನಿನ ಉಳಿದ ಅರ್ಧ ಭಾಗವನ್ನು ರವಿ ಮೋಹನ್ ತಿವಾರಿ ಅನ್ನೋರಿಗೆ ಕೇವಲ 2 ಕೋಟಿ ರೂಪಾಯಿ ಮಾರಿದ್ರು. ಇದಾದ ಐದು ನಿಮಿಷಗಳ ಬಳಿಕ ರವಿ ಮೋಹನ್ ತಿವಾರಿ ಅನ್ನೋರು 2 ಕೋಟಿಗೆ ಖರೀದಿಸಿದ ಜಮೀನನ್ನು ರಾಮಮಂದಿರ ಟ್ರಸ್ಟ್​​ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಅಯೋಧ್ಯೆ ಮೇಯರ್ ಋಷಿಕೇಶ್ ಉಪಾಧ್ಯಾಯ ಮತ್ತು ಆರ್​​ಎಸ್​ಎಸ್​​ ಸರಸಂಘಚಾಲಕ, ರಾಮಮಂದಿರ ಟ್ರಸ್ಟ್​ನ ಟ್ರಸ್ಟಿಯಾಗಿರೋ ಅನಿಲ್ ಮಿಶ್ರಾ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ಇದು ಭ್ರಷ್ಟಾಚಾರ ಅಲ್ಲದೆ ಮತ್ತೇನು..? ಈ ಸಂಬಂಧ ಸರ್ಕಾರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಯಿಂದ ತನಿಖೆಗೆ ಸೂಚಿಸಿದೆ. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗೆ ಮೇಯರ್​​ನ್ನು ತನಿಖೆಗೊಳಪಡಿಸಲು ಆಗಲ್ಲ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ರಾಮಮಂದಿರ ಟ್ರಸ್ಟ್​ನ್ನು ಸುಪ್ರೀಂಕೋರ್ಟ್​​​ ಸೂಚನೆ ಮೇರೆಗೆ ರಚಿಸಲಾಯ್ತು. ಹೀಗಾಗಿ ತನಿಖೆ ಕೂಡ ಸುಪ್ರೀಂಕೋರ್ಟ್​ ನೇತೃತ್ವದಲ್ಲಿ ನಡೆಸಬೇಕು.

ನಂತರ ಮಾತಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಎಲ್ಲಾ ಕಡೆ 5 ಗಂಟೆಗೆಲ್ಲಾ ತಹಶೀಲ್ದಾರ್ ಕಚೇರಿ ಬಂದ್ ಇರುತ್ತೆ. ಆದ್ರೆ ಇಲ್ಲಿ ಜಮೀನು ಮಾರಾಟದ ರಿಜಿಸ್ಟರ್​​ ಸಂಜೆ 6.50, 7.10, 7.15ಕ್ಕೆ ಆಗಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply