ಯುಕ್ರೇನ್- ರಷ್ಯಾ ಬಿಕ್ಕಟ್ಟು! ರಷ್ಯಾ ಹಳೇ ರಾಗ ಹಳೇ ಹಾಡು!

masthmagaa.com:

ಯುಕ್ರೇನ್‌ ಮತ್ತು ರಷ್ಯಾ ನಡುವಿನ ಬಿಕ್ಕಟ್ಟನ್ನ ಸ್ವಲ್ಪ ಮಟ್ಟಿಗೆ ತಣಿಸಲು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಯಶಸ್ವಿಯಾಗಿದ್ದಾರೆ ಅನ್ನುವಾಗಲೇ ರಷ್ಯಾ ಉಲ್ಟಾ ಹೊಡೆದಿದೆ. ಪುಟಿನ್​ ಜೊತೆ ಸೋಮವಾರ ಮಾತುಕತೆ ನಡೆಸಿದ ಮ್ಯಾಕ್ರನ್​, ಯುಕ್ರೇನ್​ ಸುತ್ತಮುತ್ತ ಹೊಸದಾಗಿ ಸೇನಾ ಕಾರ್ಯಾಚರಣೆ ನಡೆಸಲ್ಲ ಅಂತ ಪುಟಿನ್ ನಂಗೆ​ ಭರವಸೆ ನೀಡಿದ್ದಾರೆ ಹೇಳಿದ್ದರು. ಆದ್ರೆ ಮ್ಯಾಕ್ರನ್​ರ ಈ ಹೇಳಿಕೆ ಸರಿ ಇಲ್ಲ. ಯುಕ್ರೇನ್ ಸುತ್ತಮುತ್ತಲಿನ ಉದ್ವಿಗ್ನತೆಯನ್ನ ಕಮ್ಮಿ ಮಾಡುವ ಬಗ್ಗೆ ರಷ್ಯಾ ಮತ್ತು ಫ್ರಾನ್ಸ್ ಒಪ್ಪಂದ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದ್ರೆ ಡಿಎಸ್ಕಲೇಷನ್​ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪುಟಿನ್​ ಮತ್ತು ಮ್ಯಾಕ್ರನ್ ನಡುವಿನ ಸಭೆ ಆಧಾರವಾಗಿದೆ ಅಂತ ಕ್ರೆಮ್ಲಿನ್​ ವಕ್ತಾರ ಡಿಮಿರ್ಟಿ ಪೆಸ್ಕೋ ಹೇಳಿದ್ದಾರೆ.

ಇಲ್ಲಿ ರಷ್ಯಾ ಉದ್ದೇಶ ಸ್ಪಷ್ಟವಾಗಿದೆ, ನ್ಯಾಟೋಗೆ ಯುಕ್ರೇನ್​ ಮತ್ತು ಇತರ ಮಾಜಿ ಸೋವಿಯತ್ ರಾಷ್ಟ್ರಗಳನ್ನ ಅನ್ನ ಸೇರಿಸಿಕೊಳ್ಳಬಾರ್ದು. ಜೊತೆಗೆ ನ್ಯಾಟೋ ತನ್ನ ಶಸ್ತ್ರಾಸ್ತ್ರ ನಿಯೋಜನೆಯನ್ನ ನಿಲ್ಲಿಸಬೇಕು ಮತ್ತು ಪೂರ್ವ ಯುರೋಪ್‌ನಿಂದ ತನ್ನ ಸೇನಾಪಡೆಗಳನ್ನ ಹಿಂದಕ್ಕೆ ಪಡೆಯಬೇಕು ಅನ್ನೋದು ರಷ್ಯಾ ಬೇಡಿಕೆ. ಆದ್ರೆ ಅದು ಸಾಧ್ಯವಿಲ್ಲ ಅಂತ ಅಮೆರಿಕ ಮತ್ತು ನ್ಯಾಟೋ ಹೇಳ್ತಾನೇ ಬರ್ತಿದೆ.

ಮತ್ತೊಂದುಕಡೆ ಪುಟಿನ್​ ಭೇಟಿ ಬಳಿಕ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್​ ಮಂಗಳವಾರದ ಯುಕ್ರೇನ್​ ರಾಜಧಾನಿ ಕ್ವಿವ್​ಗೆ ಬಂದು ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್​ಕಿಯನ್ನ ಭೇಟಿಯಾಗಿದ್ದಾರೆ. ನಂತ್ರ ಉಭಯನಾಯಕರು ಜಂಟಿ ಹೇಳಿಕೆಯನ್ನ ಬಿಡುಗಡೆ ಮಾಡಿದ್ರು. ಈ ವೇಳೆ ಮಾತನಾಡಿದ ಮ್ಯಾಕ್ರನ್​, ರಷ್ಯಾ ಮತ್ತು ಯುಕ್ರೇನ್​ ನಾಯಕರು 2014ರ ಶಾಂತಿ ಒಪ್ಪಂದಕ್ಕೆ ಬದ್ಧವಾಗಿರೋದಾಗಿ ನಂಗೆ ಹೇಳಿದ್ದಾರೆ. ಎರಡೂ ಕಡೆಯವರ ಮಾತು ಮತ್ತು ಕೆಲಸಗಳಲ್ಲಿ ಶಾಂತಿ ತುಂಬಾ ಅಗತ್ಯವಾಗಿದೆ ಎಂದಿದ್ದಾರೆ. ಮ್ಯಾಕ್ರನ್ ನೋಡಿದ್ರೆ ಹೀಗೆ ಹೇಳ್ತಾರೆ, ಅತ್ತ ರಷ್ಯಾ ಮಾತ್ರ ಹಾಗೆ ಹೇಳ್ತಿದೆ.

ಇದನ್ನ ನೋಡಿದ್ರೆ ಈ ಬಿಕ್ಕಟ್ಟು ಸದ್ಯಕ್ಕಂತೂ ಬಗೆಹರಿಯೋ ಲಕ್ಷಣ ಕಾಣ್ತಿಲ್ಲ. ಯುಕ್ರೇನ್​ ಬಳಿಕ ಜರ್ಮನಿ ರಾಜಧಾನಿ ಬರ್ಲಿನ್​​ಗೆ ತೆರಳಿದ್ದಾರೆ ಮ್ಯಾಕ್ರನ್​. ಅಲ್ಲಿ ಜರ್ಮನಿ ಚಾನ್ಸಲರ್ ಒಲಾಫ್​ ಶೋಲ್ಸ್, ಪೊಲ್ಯಾಂಡ್​ ಅಧ್ಯಕ್ಷ ಆಂಡ್ರೆಝ್​ ಡುಡಾ ಮತ್ತು ಮ್ಯಾಕ್ರನ್​ ನಡುವೆ ಮಾತುಕತೆ ನಡೆಯಲಿದೆ. ಮಾತುಕತೆಗೂ ಮುನ್ನ ಮಾತನಾಡಿದ ಜರ್ಮನಿಯ ಒಲಾಫ್​ ಶೋಲ್ಸ್​, ಯುರೋಪಿನಲ್ಲಿ ಯುದ್ಧ ಆಗದಂತೆ ತಡೆಯೋದು ನಮ್ಮ ಕಾಮನ್​ ಗೋಲ್ ಎಂದಿದ್ದಾರೆ.

-masthmagaa.com

Contact Us for Advertisement

Leave a Reply