“ದಿ ಕೇರಳ ಸ್ಟೋರಿ” ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ಮಧ್ಯಪ್ರದೇಶ ಸರ್ಕಾರ !

masthmagaa.com:

ದಿ ಕೇರಳ ಸ್ಟೋರಿ ಚಿತ್ರ ಟೀಸರ್‌ ಯಿಂದ ಹಿಡಿದು ಸಿನಿಮಾ ರಿಲೀಸ್‌ ಆಗೋ ತನಕ ಸುದ್ದಿ ಮಾಡ್ತಾನೇ ಇದೆ. ಈ ಚಿತ್ರವನ್ನ ಬ್ಯಾನ್‌ ಮಾಡಬೇಕು ಅನ್ನೋ ಕೂಗಿನ ಮಧ್ಯೆ ಚಿತ್ರ ರಿಲೀಸ್‌ ಆಗಿ ಮೊದಲನೇ ದಿನ 8 ಕೋಟಿಯನ್ನ ಬಾಚಿ ಮಿಶ್ರ ಪ್ರತಿಕ್ರಿಯೆಯನ್ನ ಪಡೆದುಕೊಂಡಿದೆ. ಚಿತ್ರ ಬಿಡುಗಡೆ ಆದಮೇಲೆ ಮಧ್ಯಪ್ರದೇಶದಲ್ಲಿ ಹೊಸ ಬೆಳವಣಿಗೆ ಆಗಿದೆ.

ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್‌ಗ ಚೌಹಾಣ್‌ಗೆ ಚಿತ್ರದ ಟಿಕೆಟ್‌ನ ತೆರಿಗೆ ವಿನಾಯಿತಿ ಮಾಡುವಂತೆ ಒತ್ತಾಯಿಸಿದ್ರು. ಇನ್ನು ಈ ಪತ್ರವನ್ನ ಬಿಜೆಪಿ ರಾಜ್ಯ ಸಚಿವ ರಾಹುಲ್ ಕೊಠಾರಿ, ಮಧ್ಯಪ್ರದೇಶದ ಸಿಎಂಗೆ ಬರೆದಿದ್ದರು. ಇಂದು (ಮೇ 6) ಚಿತ್ರದ ಮೇಲಿನ ತೆರಿಗೆಗೆ ವಿನಾಯಿತಿ ನೀಡಲಾಗಿದೆ ಅಂತ ಮಧ್ಯಪ್ರದೇಶದ ಸಿಎಂ ಟ್ವೀಟ್‌ ಮಾಡಿದ್ದಾರೆ.

” ದಿ ಕೇರಳ ಸ್ಟೋರಿ” ಸಿನಿಮಾ ಭಯೋತ್ಪಾದನೆಯ ಭಯಾನಕ ಸತ್ಯವನ್ನು ಬಹಿರಂಗಪಡಿಸಿದ ಚಲನಚಿತ್ರವಾಗಿದೆ. ಮಧ್ಯಪ್ರದೇಶದಲ್ಲಿ ಟ್ಯಾಕ್ಸ್ ಫ್ರೀ ಮಾಡೋದಕ್ಕೆ ನಿರ್ಧರಿಸಲಾಗಿದೆ” ಅಂತ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply