ದೇಶದ ಅತಿದೊಡ್ಡ ಹುಲಿ ರಕ್ಷಿತಾರಣ್ಯಕ್ಕೆ ಕೇಂದ್ರ ಅಸ್ತು: ಎಲ್ಲಿದೆ ಇದು?

masthmagaa.com:

ಭಾರತದ ಅತಿದೊಡ್ಡ ಟೈಗರ್‌ ರಿಸರ್ವ್‌ ಅಥ್ವಾ ಹುಲಿ ಸಂರಕ್ಷಿತ ತಾಣ ಮಧ್ಯ ಪ್ರದೇಶದ ದಮೋಹ್‌ ಜಿಲ್ಲೆಯಲ್ಲಿ ತಲೆ ಎತ್ತಲಿದೆ. ಅಂದ್ರೆ ಹೊಸ ಕಾಡೊಂದು ಪತ್ತೆಯಾಗಿದೆ ಅಂತಲ್ಲ. ಈಗಾಗ್ಲೆ ಇರೋ ʻನರೋದೇಹಿʼ ಹಾಗೂ ʻರಾಣಿ ದುರ್ಗಾವತಿʼ ಅಭಯಾರಣ್ಯಗಳನ್ನ ಮರ್ಜ್‌ ಮಾಡಿ ʻಜಬೇರʼ ಅನ್ನೊ ಪ್ರದೇಶವನ್ನ ಹುಲಿ ಸಂರಕ್ಷಿತ ತಾಣ ಅಂತ ಘೋಷಣೆ ಮಾಡಲಾಗ್ತಿದೆ. ಬಫರ್‌ ಜೋನ್‌ ಹೊರತುಪಡಿಸಿ 2300 ಚದರ ಕಿಲೋಮೀಟರ್‌ ವಿಸ್ತಾರವಾದ ಅರಣ್ಯ ಇದಾಗಲಿದೆ ಅಂತ ಅರಣ್ಯ ಸಚಿವಾಲಯ ಹೇಳಿದೆ. ಸದ್ಯ ಈ ಪ್ರದೇಶದಲ್ಲಿ 16 ಹುಲಿಗಳಿದ್ದು, ಟೈಗರ್‌ ರಿಸರ್ವ್‌ ಸ್ಥಾನದಿಂದ ಕಾಡಿಗೆ ಹೆಚ್ಚಿನ ರಕ್ಷಣೆ, ಸವಲತ್ತುಗಳು ದೊರಕಲಿವೆ. ಹಾಗೆಯೇ ಇಲ್ಲಿನ ಟೂರಿಸಂಗೆ ಬೂಸ್ಟ್‌ ಸಿಗಲಿದೆ ಅಂತ ದಮೋಹ್‌ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಆಂಧ್ರ ಪ್ರದೇಶದ ನಾಗಾರ್ಜುನಸಾಗರ್‌-ಶ್ರೀಶೈಲಮ್‌ ರಕ್ಷಿತಾರಣ್ಯ ವಿಸ್ತೀರ್ಣದ ಲೆಕ್ಕದಲ್ಲಿ ಮೊದಲ ಸ್ಥಾನದಲ್ಲಿದೆ. ಹುಲಿಗಳ ಲೆಕ್ಕದಲ್ಲಿ ಉತ್ತರಾಖಂಡ್‌ನ ಜಿಮ್‌ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ 266 ಹುಲಿಗಳೊಂದಿದೆ ಮೊದಲ ಸ್ಥಾನದಲ್ಲಿದೆ. ಕ್ರಮವಾಗಿ 150, 141 ಹುಲಿಗಳೊಂದಿಗೆ ನಮ್ಮ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

-masthmagaa.com

Contact Us for Advertisement

Leave a Reply