ಮಹಾರಾಷ್ಟ್ರದಲ್ಲಿ ಕೊರೋನಾ ರಾಕ್ಷಸನ ಎರಡನೇ ಅಲೆ ಕನ್ಫರ್ಮ್​!

masthmagaa.com:

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಲಕ್ಷಣಗಳು ದಟ್ಟವಾಗಿದೆ. ಯಾಕಂದ್ರೆ, ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಬರೋಬ್ಬರಿ 8,807 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಂದೇ ದಿನ ಇಷ್ಟು ಜನರಿಗೆ ಸೋಂಕು ತಗುಲಿರೋದು 129 ದಿನಗಳು.. ಅಂದ್ರೆ 4 ತಿಂಗಳ ಬಳಿಕ ಇದೇ ಮೊದಲು. ಇನ್ನು ಸಾವಿನ ವಿಚಾರಕ್ಕೆ ಬಂದ್ರೆ 24 ಗಂಟೇಲಿ 80 ಸೋಂಕಿತರು ಮೃತಪಟ್ಟಿದ್ದಾರೆ. ಇದು ಕೂಡ ಎರಡು ತಿಂಗಳ ಬಳಿಕ ದೃಢಪಟ್ಟ ಅತಿ ಹೆಚ್ಚು ಸಾವು. ಹಾಗಾದ್ರೆ 24 ಗಂಟೇಲಿ ಮಹಾರಾಷ್ಟ್ರದಲ್ಲಿ ಗುಣಮುಖರಾದವರೆಷ್ಟು ಗೊತ್ತಾ? ಜಸ್ಟ್ 2,772.. ಮುಂಬೈ ನಗರ, ಪುಣೆ ಮತ್ತು ನಾಗ್ಪುರ್​ ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಕೇಸ್​ ಪತ್ತೆಯಾಗಿದೆ.​ ಎರಡನೇ ಅಲೆಯನ್ನ ಕಂಟ್ರೋಲ್ ಮಾಡಲು ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಲಾಕ್​ಡೌನ್​, ನೈಟ್​ ಕರ್ಫ್ಯೂ ಜಾರಿಯಾಗಿದೆ.

ಮಹಾರಾಷ್ಟ್ರ ಕೊರೋನಾ ನಂಬರ್ಸ್:

ಒಟ್ಟು ಸೋಂಕಿತರು: 21.21 ಲಕ್ಷ

ಒಟ್ಟು ಗುಣಮುಖ: 20.08 ಲಕ್ಷ

ಒಟ್ಟು ಸಾವು: 51,937

ಸಕ್ರಿಯ ಪ್ರಕರಣ: 60,559

ಕೊರೋನಾದ ಎರಡನೇ ಅಲೆಗೆ ತತ್ತರಿಸಿರೋ ಮಹಾರಾಷ್ಟ್ರ ಕಥೆ ಹೀಗಾದ್ರೆ, ಇಡೀ ದೇಶದಲ್ಲೂ ಕೊರೋನಾ ದಾಖಲೆ ಬರೆದಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,738 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆಲ್ಮೋಸ್ಟ್​ ಒಂದು ತಿಂಗಳ ಬಳಿಕ ದೃಢಪಟ್ಟ ಹೈಯೆಸ್ಟ್​ ನಂಬರ್ಸ್​ ಇದು. ಈ ಹಿಂದೆ ಜನವರಿ 29ನೇ ತಾರೀಖು 18,000 ಪ್ರಕರಣ ದೃಢಫಟ್ಟಿತ್ತು. ಇಂಟರೆಸ್ಟಿಂಗ್ ಅಂದ್ರೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣದಲ್ಲಿ ಅಂದ್ರೆ 16,000 ಪ್ರಕರಣದಲ್ಲಿ 8 ಸಾವಿರ ಪ್ರಕರಣ ಮಹಾರಾಷ್ಟ್ರದ್ದೇ. ಅದನ್ನ ಬಿಟ್ರೆ ಕೇರಳದಲ್ಲಿ 4,100 ಪ್ರಕರಣ ದೃಢಪಟ್ಟಿದೆ. ಹೀಗೆ ಎರಡು ರಾಜ್ಯದಲ್ಲೇ 12ರಿಂದ 13 ಸಾವಿರ… ಉಳಿದ ರಾಜ್ಯಗಳದ್ದು ಬರೀ 3,000…

ಭಾರತದ ಕೊರೋನಾ ನಂಬರ್ಸ್:

ಒಟ್ಟು ಸೋಂಕಿತರು: 1.10 ಕೋಟಿ

ಒಟ್ಟು ಗುಣಮುಖ: 1.07 ಕೋಟಿ

ಒಟ್ಟು ಸಾವು: 1,56,705

ಸಕ್ರಿಯ ಪ್ರಕರಣ: 1,51,708

-masthmagaa.com

Contact Us for Advertisement

Leave a Reply