masthmagaa.com:

ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಸತತ ಎರಡನೇ ದಿನವೂ 8,000ಕ್ಕೂ ಹೆಚ್ಚು ಕೊರೋನಾ ಪ್ರಕರಣ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 8,702 ಕೊರೋನಾ ಕೇಸ್, 59 ಸಾವು ವರದಿಯಾಗಿದೆ. ಮುಂಬೈನಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರ ಬಿಟ್ರೆ ಕೇರಳದಲ್ಲಿ 3,677 ಪ್ರಕರಣ ದೃಢಪಟ್ಟಿದೆ. ಇದೆಲ್ಲದರ ಪರಿಣಾಮ ದೇಶದಲ್ಲಿ ನಿರಂತರ ಎರಡನೇ ದಿನವೂ 16,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕಳೆದ 24 ಗಂಟೇಲಿ ದೇಶದಲ್ಲಿ 16,577 ಜನರಿಗೆ ಸೋಂಕು ತಗುಲಿದ್ದು, 120 ಸೋಂಕಿತರು ಮೃತಪಟ್ಟಿದ್ದಾರೆ. 12,179 ಸೋಂಕಿತರು ಗುಣಮುಖರಾಗಿದ್ದಾರೆ. ಅಂದ್ರೆ ಒಂದು ದಿನದಲ್ಲಿ ದೃಢಪಟ್ಟ ಪ್ರಕರಣಕ್ಕಿಂತ 4 ಸಾವಿರ ಕಮ್ಮಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಾ ಹೋಗ್ತಿದೆ.

-masthmagaa.com

Contact Us for Advertisement

Leave a Reply