ಬೆಳಗಾವಿ, ಕೊಪ್ಪಳದಲ್ಲಿ ಹೆಚ್ಚಾದ ಮಕ್ಕಳ ಕಳ್ಳರ ವದಂತಿ: ಇದು ಸುಳ್ಳು ಸುದ್ದಿ, ಇದಕ್ಕೆ ಕಿವಿ ಕೊಡ ಬೇಡಿ ಎಂದ ಎಸ್​ಪಿ

masthmagaa.com:

ಇತ್ತೀಚೆಗೆ ಮಕ್ಕಳ ಕಳ್ರು ಬಂದಿದ್ದಾರೆ ಅನ್ನೋ ಸುಳ್ಳು ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗ್ತಾ ಇವೆ. ಇದು ಹಲವು ಅವಾಂತರಗಳಿಗೂ ಕಾರಣವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಕೊಪ್ಪಳ ಹಾಗೂ ಬೆಳಗಾವಿಯಲ್ಲಿ ಕೂಡ ಇದೇ ರೀತಿ ವದಂತಿ ಹರಿದಾಡುತ್ತಿದ್ದು ನಂದಗಡ, ಕೌಜಲಗಿ ಮುಂತಾದ ಕಡೆಯಲ್ಲಿ ಮಾನಸಿಕ ಅಸ್ವಸ್ಥ, ರಗ್ಗು ಮಾರುವರು, ಸಾಧುಗಳನ್ನ ಥಳಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇವೆಲ್ಲ ಸುಳ್ಳು ಸುದ್ದಿಗಳು, ಆ ರೀತಿ ನಿಮಗೆ ಅಪರಿಚಿತರು, ಸಂಶಯಾಸ್ಪದವಾಗಿ ಕಂಡುಬಂದ್ರೆ 112ಗೆ ಕಾಲ್‌ ಮಾಡಿ ಪೋಲಿಸ್ರಿಗೆ ತಿಳಿಸಿ ಅದನ್ನ ಬಿಟ್ಟು ಕಾನೂನು ಕೈಗೆ ತಗೋಬಾರ್ದು ಅಂತ ಬೆಳಗಾವಿ ಎಸ್‌ಪಿ ಸಂಜೀವ್‌ ಪಾಟೀಲ್‌ ಹೇಳಿದ್ದಾರೆ. ಇನ್ನು ಈ ಕುರಿತು ರಾಜ್ಯ ಗೃಹ ಸಚಿವ ಅರಗಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು ಸುಳ್ಳುಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ. ಮಕ್ಕಳ ಕಳ್ಳರೇ ಬಂದ್ರೂ ಅವರನ್ನ ಶಿಕ್ಷೆಗೆ ಒಳಪಡಿಸುವ ಹಕ್ಕು ನಮಗ್ಯಾರಿಗೂ ಇಲ್ಲ, ಅದಕ್ಕೆ ಕಾನೂನು ಇದೆ. ಪೊಲೀಸ್‌ ಇದೆ. ಅನಾವಶ್ಯಕ ಸುದ್ದಿಗಳಿಂದ ಭೀತಿಗೊಳಗಾಗೋದು ಬೇಡ. ಸುದ್ದಿ ಹಬ್ಬಿಸಿದವರ ಮೇಲೆ ಕಾನೂನು ಕ್ರಮ ಆಗುತ್ತೆ. ಯಾರೂ ಕಾನೂನನ್ನ ಕೈಗೆ ತೆಗೆದುಕೊಳ್ಳಬೇಡಿ ಅಂತ ಮನವಿ ಮಾಡಿದ್ದಾರೆ.

-mathmagaa.com

Contact Us for Advertisement

Leave a Reply