ಮಹರಾಷ್ಟ್ರ ರಾಜಕೀಯ : ಸಿಎಂ ಉದ್ದವ್‌ ಠಾಕ್ರೆ ವಿರುದ್ದ ದೇಶದ್ರೋಹ ದಾಖಲಿಸುವಂತೆ PIL!

masthmagaa.com:

ಮಹಾರಾಷ್ಟ್ರದ ಪವರ್‌ ಪಾಲಿಟಿಕ್ಸ್‌ ಬೀದಿಕಾಳಗಕ್ಕೆ ಸುಪ್ರೀಂ ಕೋರ್ಟ್‌ ನಿನ್ನೆಯಷ್ಟೇ ತಾತ್ಕಲಿಕ ಕದನ ವಿರಾಮ ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಉಭಯ ಬಣಗಳು ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋ ಕುತೂಹಲ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಜೋರಾಗಿದೆ. ಶಿಂಧೆ ಬಣವೇ ಮನಸ್ಸು ಬದಲಾಯಿಸಿ ಉದ್ದವ್‌ ಗೂಡು ಸೇರಿಕೊಳ್ಳುತ್ತಾ ಅಥವಾ ಉದ್ದವ್‌ ಅವರೇ ಶಿಂಧೆಯ ಕಂಡಿಷನ್‌ಗೆ ಒಪ್ಪಿ ರಾಜಿ ಮಾಡಿಕೊಳ್ತಾರಾ ಅನ್ನೋ ಸಾಧ್ಯ ಸಾಧ್ಯತೆಗಳನ್ನ ಲೆಕ್ಕಚಾರ ಮಾಡಲಾಗ್ತಿದೆ. ಇದರ ನಡುವೆಯೇ ರೆಬೆಲ್‌ ಶಾಸಕರಿಗೆ ಸಿಎಂ ಉದ್ದವ್‌ ಠಾಕ್ರೆ ಪತ್ರ ಬರೆದಿದ್ದು ಮುಖಾಮುಖಿ ಚರ್ಚೆಗೆ ಆಹ್ವಾನ ಕೊಟ್ಟಿದ್ದಾರೆ. ಆದ್ರೆ ಇದನ್ನ ಶಿಂಧೆ ಯಾವರೀತಿ ತೆಗೆದುಕೊಳ್ತಾರೋ ನೋಡ್ಬೇಕು. ಇನ್ನು ಶಿಂಧೆ ಬಣದಲ್ಲಿದ್ದ ಸುಮಾರು 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಸಿಎಂ ಉದ್ದವ್‌ ಠಾಕ್ರೆ ಹೇಳಿದ್ರು. ಇದಕ್ಕೆ ಪ್ರತಿಕ್ರಿಯಿಸಿ ಬಂಡಾಯ ನಾಯಕ ಏಕನಾಥ್‌ ಶಿಂಧೆ ಸಂಪರ್ಕದಲ್ಲಿರೋ ಹೆಸರನ್ನ ಬಹಿರಂಗ ಪಡಿಸುವಂತೆ ಚಾಲೆಂಜ್‌ ಹಾಕಿದ್ದಾರೆ. ಜೊತೆಗೆ ನನ್ನ ಹತ್ತಿರ ಈಗ 50 ಸೈನಿಕರಪಡೆ ಇದೆ. ನಾವೆಲ್ಲ ಶಿವಸೈನಿಕರು ಬಾಳಾಠಾಕ್ರೆಯ ಅನುಯಾಯಿಗಳು. ಹಿಂದ್ವುವನ್ನ ಮುಂದುವರೆಸುತ್ತೇವೆ ಅಂತ ಹೇಳಿದ್ದಾರೆ. ಇತ್ತ ಈಗಾಗಲೇ ಸಿಎಂ ಕುರ್ಚಿಯಿಂದ ಅರ್ಧಕ್ಕೆ ಎದ್ದು ನಿಂತಿರೋ ಉದ್ದವ್‌ ಠಾಕ್ರೆಯನ್ನ ನೂಕಿ ಸಿಎಂ ಸ್ಥಾನ ಕೈವಶ ಮಾಡೋಕೆ ನೋಡ್ತಿರೋ ಬಿಜೆಪಿ ತೆರೆಮರೆಯಲ್ಲೇ ಭಾರಿ ತಯಾರಿ ನಡೆಸ್ತಿದೆ. ಇದರ ಭಾಗವಾಗಿ ಶಿವಸೇನೆಯ ಬಂಡಾಯ ಶಾಸಕರ ಜೊತೆ ಸೇರಿ 50 – 50 ಸರ್ಕಾರ ರಚಿಸೋಕೆ ಇದು ಪ್ಲಾನ್‌ ಮಾಡ್ತಿದೆ ಅಂತ ಮೂಲಗಳು ತಿಳಿಸಿವೆ. ಅದರಲ್ಲೂ ಶಿಂಧೆ ಬಣಕ್ಕೆ 5 ಪವರ್‌ ಫುಲ್ ಖಾತೆ ಹಾಗೂ ಏಕನಾಥ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಡೋಕೆ ಚರ್ಚೆ ಮಾಡಲಾಗಿದೆ ಅನ್ನೋ ವರದಿ ಸಿಕ್ಕಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಇಂದು ದೆಹಲಿಗೆ ಹಾರಿದ್ದಾರೆ. ಇತ್ತ ಇನ್ನೊಂದು ಕಡೆ ಶಿಂಧೆ ಬಳಗ ಅಸ್ಸಾಂ ತೊರೆದು ಮಹಾರಾಷ್ಟ್ರಕ್ಕೆ ಬರುವ ಘೋಷಣೆ ಮಾಡಿದ್ದು ಉದ್ದವ್‌ ಸರ್ಕಾರಕ್ಕೆ ಪತನದ ಭೀತಿ ಎದುರಾಗಿದೆ.ಇತ್ತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಚಿವ ಆದಿತ್ಯ ಠಾಕ್ರೆ ಮತ್ತು ಶಿವಸೇನಾ ಸಂಸದ ಸಂಜಯ್ ರಾವತ್ ವಿರುದ್ಧ ದೇಶದ್ರೋಹ ಮತ್ತು ಸಾರ್ವಜನಿಕ ಶಾಂತಿ ಭಂಗದ ಆರೋಪದಲ್ಲಿ ಕೇಸ್‌ ದಾಖಲಿಸುವಂತೆ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದಾರೆ. ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಹೇಮಂತ್‌ ಪಾಟೀಲ್‌ ಬಾಂಬೆ ಹೈಕೋರ್ಟ್‌ನಲ್ಲಿ ಇಂದು PIL ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply