ಶಿರಡಿ ಸಾಯಿಬಾಬಾ ದರ್ಶನಕ್ಕೆ ದಿನಕ್ಕೆ 25 ಸಾವಿರ ಮಂದಿಗೆ ಅವಕಾಶ!

masthmagaa.com:

ಕೊರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇಗುಲದಲ್ಲಿ ಪ್ರತಿದಿನ ಮತ್ತೂ 10 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಆನ್​ಲೈನ್​ನಲ್ಲಿ ಪಾಸ್ ಪಡೆದ 15 ಸಾವಿರ ಜನರಿಗೆ ಅವಕಾಶ ನೀಡಲಾಗಿತ್ತು. ಈಗ ಆಫ್​​ನಲ್ಲಿ ಪಾಸ್ ಪಡೆದ 10 ಸಾವಿರ ಜನರಿಗೂ ಅವಕಾಶ ನೀಡಲಾಗ್ತಿದೆ. ಅಂದ್ರೆ ದಿನಕ್ಕೆ ಒಟ್ಟು 25 ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

-masthmagaa.com

Contact Us for Advertisement

Leave a Reply