ಲೋಕಸಭೆ ನೈತಿಕ ಸಮಿತಿ ಮುಂದೆ ಬರಲು ಒಪ್ಪದ ಮಹುವಾ ಮೊಯಿತ್ರಾ! ಕಾರಣವೇನು?

masthmagaa.com:

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿರೋ ಕೇಸ್‌ಗೆ ಸಂಬಂಧಿಸಿದಂತೆ ಲೋಕಸಭೆ ನೈತಿಕ ಸಮಿತಿ ಅಕ್ಟೋಬರ್‌ 31ರಂದು ಹಾಜರಾಗುವಂತೆ TMC ಸಂಸದೆ ಮಹುವಾ ಮೋಯಿತ್ರಾ ಅವ್ರಿಗೆ ನೋಟಿಸ್‌ ನೀಡಿತ್ತು. ಈ ಬಗ್ಗೆ ಕಮಿಟಿಗೆ ಉತ್ತರಿಸಿರೋ ಮಹುವಾ,ಅಕ್ಟೋಬರ್ 31 ರಂದು ಸಮಿತಿ ಮುಂದೆ ಹಾಜರಾಗಲು ನೋಟೀಸ್​ ನೀಡಲಾಗಿದೆ. ಆದರೆ ನನಗೆ ನೋಟಿಸ್​ ಇಮೇಲ್ ಮಾಡುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ನವೆಂಬರ್ 4ರವರೆಗೆ ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದು, ಅವು ಮುಗಿದ ನಂತರ ಸಮಿತಿ ಮುಂದೆ ಹಾಜರಾಗುವುದಾಗಿ ಮೊಯಿತ್ರಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply