ಮಾಲ್ಡೀವ್ಸ್‌ ವಿವಾದ! ಮೊಹಮ್ಮದ್‌ ಮುಯಿಝು ಕೆಳಗಿಳಿಸೋಕೆ ಕರೆ!

masthmagaa.com:

ಮಾಲ್ಡೀವ್ಸ್‌ ಸರ್ಕಾರದ ಭಾರತ ವಿರೋಧಿ ನಿಲುವಿಗೆ ಈಗ ಮಾಲ್ಡೀವ್ಸ್‌ನಲ್ಲೇ ವಿರೋಧ ಕೇಳಿಬರ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅವಹೇಳನಕಾರಿ ಪೊಸ್ಟ್‌ಗಳ ವಿವಾದ ಭುಗಿಲೆದ್ದ ಬೆನ್ನಲ್ಲೇ ಇದೀಗ ಮಾಲ್ಡೀವ್ಸ್‌ ವಿರೋಧ ಪಕ್ಷಗಳು ಅಧ್ಯಕ್ಷ ಮೊಹಮದ್‌ ಮುಯಿಝು ವಿರುದ್ಧ ತಿರುಗಿಬಿದ್ದಿವೆ. ಅಲ್ಲಿನ ಸಂಸದೀಯ ಅಲ್ಪ ಸಂಖ್ಯಾತರ ನಾಯಕ ಅಲಿ ಅಜಿಮ್‌, ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯ್ಜು ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕರೆ ಕೊಟ್ಟಿದ್ದಾರೆ. ʻನಾವು ನಮ್ಮ ವಿದೇಶಾಂಗ ನೀತಿ ಸ್ಥಿರವಾಗಿರ್ಬೇಕು ಅಂತ ಬಯಸ್ತೀವಿ. ಜೊತೆಗೆ ಮಾಲ್ಡೀವ್ಸ್‌ ನೆರೆಯ ದೇಶಗಳಿಂದ ದೂರಾಗಿ, ಐಸೋಲೇಟ್‌ ಆಗಿ ಇರೋದನ್ನ ತಡೀಬೇಕು ಅಂತಿದ್ದೀವಿ. ಸೋ ಈಗ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಅವ್ರನ್ನ ತೆಗೆದು ಹಾಕೋಕೆ ನೀವೆಲ್ಲಾ ರೆಡಿ ಇದ್ದೀರಾ? ಅವಿಶ್ವಾಸ ವೋಟಿಂಗ್‌ ನಡೆಸೋಕೆ ಮಾಲ್ಡೀವಿಯನ್‌ ಡೆಮೊಕ್ರೆಟಿಕ್‌ ಪಾರ್ಟಿ ರೆಡಿಯಿದ್ಯಾ?ʼ ಅಂತ ಕೇಳಿದ್ದಾರೆ. ಇನ್ನೊಂದ್ಕಡೆಯಿಂದ ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮರಿಯಾ ಅಹ್ಮದ್‌ ದೀದಿ ಭಾರತ ಮಾಲ್ಡೀವ್ಸ್‌ಗೆ ಎಷ್ಟು ಇಂಪಾರ್ಟೆಂಟ್‌ ಅಂತ ಅಲ್ಲಿನ ಸರ್ಕಾರಕ್ಕೆ ಪಾಠ ಮಾಡಿದ್ದಾರೆ. ʻಭಾರತ ನಮಗೆ ಒಂದು ರೀತಿ 911 ಎಮರ್ಜೆನ್ಸಿ ಕಾಲ್‌ ಇದ್ಹಾಗೆ. ನಮಗೆ ಅಗತ್ಯ ಇದ್ದಾಗೆಲ್ಲಾ ಭಾರತಕ್ಕೆ ಕಾಲ್‌ ಮಾಡಿದ್ದೇವೆ. ಭಾರತ ಸದಾ ನಮ್ಮ ರಕ್ಷಣೆಗೆ ಬಂದಿತ್ತು. ಭಾರತ ಅಂಥಾ ಒಳ್ಳೆ ಮಿತ್ರ ನಮ್ಗೆ. ಆದ್ರೆ ಇಂತಹ ಒಳ್ಳೇ ಸ್ನೇಹಿತನ ವಿರುದ್ಧವೇ ಅವಹೇಳನಕಾರಿ ಮಾತುಗಳನ್ನ ಕೇಳೋಕೆ ತುಂಬಾ ಬೇಸರವಾಗುತ್ತೆʼ ಅಂತ ಹೇಳ್ಕೊಂಡಿದ್ದಾರೆ. ಜೊತೆಗೆ ʻಪ್ರಧಾನಿ ನರೇಂದ್ರ ಮೋದಿಯವ್ರ ವಿರುದ್ಧ ಈ ರೀತಿ ಟೀಕಿಸಿರೋದು, ಮಾಲ್ಡೀವ್ಸ್‌ ಸರ್ಕಾರದ ಮೂರ್ಖತನವನ್ನ ತೋರ್ಸುತ್ತೆʼ ಅಂತಾನೂ ಹೇಳಿದ್ದಾರೆ. ಇನ್ನು ಅತ್ತ ಮಾಲ್ಡೀವ್ಸ್‌ ವಿಚಾರದಲ್ಲಿ ಭಾರತ ಓಪನ್‌ ಮೈಂಡೆಡ್‌ ಆಗಿರ್ಬೇಕು ಅಂತ ಚೀನಾ ಉಪದೇಶ ಮಾಡಿದೆ. ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯ್ಜು ಬೀಜಿಂಗ್‌ಗೆ ತಲುಪಿದ ಬೆನ್ನಲ್ಲೇ ಚೀನಾ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಈ ರೀತಿ ಹೇಳಿದೆ. ನಾವು ಭಾರತ-ಚೀನಾ ಸಂಘರ್ಷದ ವಿಚಾರವಾಗಿ ಮಾಲ್ಡೀವ್ಸ್‌ನ್ನ ಭಾರತದಿಂದ ದೂರ ಇರಿ ಅನ್ನಲ್ಲ. ಭಾರತ, ಚೀನಾ, ಮಾಲ್ಡೀವ್ಸ್‌ ಜೊತೆ ತ್ರಿಪಕ್ಷೀಯ ಸಹಕಾರಕ್ಕೂ ನಾವು ರೆಡಿ ಇದೀವಿ. ಭಾರತ ಓಪನ್‌ ಮೈಂಡೆಡ್‌ ಆಗಿ ಇರ್ಬೇಕು ಅಷ್ಟೆ. ದಕ್ಷಿಣ ಏಷ್ಯಾದ ದೇಶಗಳ ಜೊತೆ ಚೀನಾದ ಸಂಬಂಧ ಕೇವಲ ಒನ್‌ ಸೈಡೆಡ್‌ ಅಲ್ಲ. ಅಲ್ಲಿನ ದೇಶಗಳಿಗೂ ಇದ್ರಿಂದ ಉಪಯೋಗ ಆಗತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply