ಬಿಜೆಪಿ ವಿರುದ್ದ ಜಾತಿ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ!

masthmagaa.com:

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ʻರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್‌ ರಾಮಮಂದಿರ ಕಾರ್ಯಕ್ರಮಕ್ಕೆ ಬರ್ಲಿಲ್ಲ. ಹೊಸ ಪಾರ್ಲಿಮೆಂಟ್‌ ಉದ್ಘಾಟನೆಗೆ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿಲ್ಲ. ಶಂಕುಸ್ಥಾಪನೆಗೆ ರಾಮನಾಥ್‌ ಕೋವಿಂದ್‌ ಅವ್ರಿಗೆ ಚಾನ್ಸ್‌ ಸಿಕ್ಕಿಲ್ಲ. ಅವರು SC, ST ಸಮುದಾಯಗಳಿಗೆ ಸೇರಿದವರೆಂದು ಅವರನ್ನ ಈ ಕಾರ್ಯಕ್ರಮಗಳಿಗೆ ಕರೆದಿಲ್ಲ. ಈ ಮೂಲಕ ಅವರಿಗೆ ಅಗೌರವ ತೋರಿದ್ದಾರೆ ಅಂತೇಳಿದ್ದಾರೆ. ಅಲ್ಲದೆ, ʻಕಾಂಗ್ರೆಸ್‌ ರಾಮಮಂದಿರ ಕಾರ್ಯಕ್ರಮಕ್ಕೆ ಬರ್ಲಿಲ್ಲ ಅಂತ ಪ್ರಧಾನಿ ಹೇಳ್ತಾರೆ. ಆದ್ರೆ ಪರಿಶಿಷ್ಟ ಜಾತಿಯ ಜನರಿಗೆ ಹಲವು ದೇವಸ್ಥಾನಗಳಲ್ಲಿ ಎಂಟ್ರಿ ಇಲ್ಲ. ನಾನು ರಾಮಮಂದಿರಕ್ಕೆ ಹೋಗಿದ್ರೆ ಅವರು ಅದನ್ನ ಸಹಿಸಿಕೊಳ್ತಿದ್ರಾʼ ಅಂತೇಳಿದ್ದಾರೆ. ರಾಮಮಂದಿರ ಕಾರ್ಯಕ್ರಮವನ್ನ ಮತ್ತೆ ರಾಜಕೀಯ ಕಾರ್ಯಕ್ರಮ ಅಂದಿರೋ ಮಲ್ಲಿಕಾರ್ಜುನ ಖರ್ಗೆ, ʻರಾಮಮಂದಿರ ಇರ್ಲೀ.. ಹಳ್ಳಿಗಳಲ್ಲಿ ಸಣ್ಣ ದೇವಸ್ಥಾನಕ್ಕೆ ಆ ಸಮುದಾಯಗಳ ಜನರನ್ನ ಸೇರಿಸಲ್ಲ. ನೀರು ಕುಡಿಯೋಕೆ ಬಿಡಲ್ಲ. ಅಷ್ಟೆ ಯಾಕೆ ಮೀಸೆ ಬಿಡೋದಕ್ಕೂ ಜನರಿಗೆ ಸ್ವಾತಂತ್ರ್ಯ ಇಲ್ಲʼ ಅಂತ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply